ಪೌರತ್ವ ಪ್ರತಿಭಟನೆ: ಜೆಎನ್‍ಯು ವಿದ್ಯಾರ್ಥಿ ವಿರುದ್ಧ ವಿವಿಧ ರಾಜ್ಯಗಳಲ್ಲಿ ದೇಶದ್ರೋಹ ಪ್ರಕರಣ; ಅವರು ಹೇಳಿದ್ದೇನು?

0
707

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 28: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿ ಭಯೋತ್ಪಾದನಾ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಸಂಶೋಧಕ ವಿದ್ಯಾರ್ಥಿ ಶರ್ಜಿಲ್ ಇಮಾಮ್ ವಿರುದ್ಧ ಐದು ರಾಜ್ಯಗಳಲ್ಲಿ ದೇಶದ್ರೋಹ ಕೇಸು ದಾಖಲಾಗಿದೆ. ಶರ್ಜಿಲ್ ಇಮಾಮ್ ವಿರುದ್ಧ ಉತ್ತರಪ್ರದೇಶ, ಅಸ್ಸಾಂ, ದಿಲ್ಲಿ, ಅರುಣಾಚಲ ಪ್ರದೇಶ, ಮಣಿಪುರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಜನವರಿ ಹದಿನಾರರಂದು ಅಲಿಗಡ ಕ್ಯಾಂಪಸ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಒಂದು ತಿಂಗಳು ಅಸ್ಸಾಮಿನ ರಸ್ತೆ ತಡೆಯುವುದಾದರೆ ಈಶಾನ್ಯ ರಾಜ್ಯಗಳನ್ನು ಭಾರತದಿಂದ ಬೇರ್ಪಡಿಸಿದಂತಾಗುವುದು. ಆಗ ಅವರು ನಮ್ಮ ವಿಚಾರಗಳನ್ನು ಆಲಿಸುವರೆಂದು ಶರ್ಜಿಲ್ ಹೇಳಿದ್ದರು.

ಬಿಹಾರದ ನಿವಾಸಿ ಶರ್ಜಿಲ್ ಮನೆಯಲ್ಲಿ ಕಳೆದ ದಿವಸ ಪೊಲೀಸರು ದಾಳಿ ಮಾಡಿ ಇಬ್ಬರು ಸಂಬಂಧಿಕರು, ಕುಟುಂಬದ ಚಾಲಕನನ್ನು ವಶಕ್ಕೆ ಪಡೆದು ಬಿಟ್ಟು ಕಳಿಸಿದ್ದಾರೆ. ಭಾಷಣವನ್ನು ತಿರುಚಿ ಮಾಧ್ಯಮಗಳು ನಡೆಸಿದ ಅಪಪ್ರಚಾರ ಇದು ಎಂದು ಶರ್ಜಿಲ್‍ರ ತಾಯಿ ಅಫ್ಶಾನ್ ರಹೀಂ ಹೇಳಿದರು. ಇದೇವೇಳೆ ಶರ್ಜಿಲ್‍ರ ಭಾಷಣವನ್ನು ಒಪ್ಪಲು ಸಾದ್ಯವಿಲ್ಲ, ಆದರೆ ದೇಶದ್ರೋಹ ಪ್ರಕರಣ ನ್ಯಾಯಾಲಯದಲ್ಲಿ ನಿಲ್ಲದು ಎಂದು ಜಸ್ಟಿಸ್ ಮಾರ್ಕಂಡೇಯ ಕಟ್ಜು ಹೇಳಿದ್ದಾರೆ.