ಮನೆಯನ್ನೇ ವಿಭಜಿಸುವ ಸಿಎಎ, ಎನ್‍ಆರ್ ಸಿಗೆ ಬೆಂಬಲ ಇಲ್ಲ- ಪೂಜಾ ಭಟ್

0
2770

ಸನ್ಮಾರ್ಗ ವಾರ್ತೆ

ಮುಂಬೈ, ಜ. 28: ಸಿಎಎ, ಎನ್‍ಆರ್ ಸಿ ವಿರುದ್ಧ ದಕ್ಷಿಣ ಮುಂಬೈಯಲ್ಲಿ ನಡೆದ ಸಮ್ಮೇಳನದಲ್ಲಿ ಮಾತಾಡಿದ ಬಾಲಿವುಡ್ ನಟಿ ಪೂಜಾ ಭಟ್ ನಮ್ಮ ಮೌನ, ನಮ್ಮನ್ನೋ ಸರಕಾರವನ್ನೋ ರಕ್ಷಿಸುವುದಿಲ್ಲ. ನಿಜವಾಗಿ ಆಳುವ ಪಾರ್ಟಿ ನಮ್ಮನ್ನು ಇಲ್ಲಿ ಒಟ್ಟುಸೇರಿಸಿದೆ. ನಾವು ಧ್ವನಿ ಎತ್ತಬೇಕಾದ ಸಮಯ ಇದೆಂಬುದು ವಿದ್ಯಾರ್ಥಿಗಳ ಸಂದೇಶವಾಗಿದೆ. ಅಧಿಕಾರಿಗಳು ನಮ್ಮ ಧ್ವನಿಯನ್ನು ಜೋರಾಗಿ ಸ್ಪಷ್ಟವಾಗಿ ಕೇಳುವವರೆಗೆ ಇದು ಕೊನೆಗೊಳ್ಳುವುದಿಲ್ಲ. ದೇಶಪ್ರೇಮವೆಂಬುದು ಮುಖ್ಯ ವಿಷಯದಲ್ಲಿ ಭಿನ್ನಾಭಿಪ್ರಾಯವನ್ನು ಬಹಿರಂಗಪಡಿಸುವುದಾಗಿದೆ ಎಂದು ಪೂಜಾ ಭಟ್ ಹೇಳಿದರು.

ದೇಶಕ್ಕಾಗಿ ಎದ್ದಿರುವ ಧ್ವನಿಯನ್ನು ನಾಯಕರು ಆಲಿಸಬೇಕು. ಭಾರತದ ಎಲ್ಲ ಮಹಿಳೆಯರೊಂದಿಗೆ ಶಾಹಿನ್‍ಬಾಗ್ ಮತ್ತು ಲಕ್ನೋದಲ್ಲಿರುವ ಮಹಿಳೆಯರು ಹೇಳುವೆನೆಂದರೆ, ನಿಮ್ಮ ಧ್ವನಿ ಅವರು ಸ್ಪಷ್ಟವಾಗಿ ಕೇಳುವವರೆಗೆ ಹೋರಾಟ ಕೊನೆಗೊಳಿಸಬೇಡಿ ಎಂದಾಗಿದೆ. ಸ್ವಂತ ಮನೆಯನ್ನು ವಿಭಜಿಸುವ ಸಿಎಎ, ಎನ್‍ಆರ್ ಸಿಯನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಭಟ್ ಹೇಳಿದರು. ಪಾರ್ಚಂ ಫೌಂಡೇಶನ್ ವಿ ದಿ ಪೀಪಲ್ ಆಫ್ ಮಹಾರಾಷ್ಟ್ರ ಜಂಟಿಯಾಗಿ ಸಮ್ಮೇಳನವನ್ನು ಆಯೋಜಿಸಿತ್ತು. ಸಿಎಎ, ಎನ್‍ಆರ್ ಸಿ, ಎನ್‍ಪಿಆರ್ ಕುರಿತು ಮಹಾರಾಷ್ಟ್ರ ಸರಕಾರ 30 ದಿವಸಗಳೊಳಗೆ ತನ್ನ ನಿಲುವನ್ನು ವ್ಯಕ್ತಪಡಿಸಬೇಕೆ೦ದು ಪೂಜಾ ಭಟ್ ಆಗ್ರಹಿಸಿದರು. ಪ್ರಮುಖರು ಸಹಿಮಾಡಿದ ಮನವಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.