ಗೂಗಲ್, ಟ್ವಿಟರ್‌, ಫೇಸ್‌ಬುಕ್‌ಗೆ ನೋಟಿಸ್‌ ಜಾರಿಯಾಗಲು ಕಾರಣವೇನು ಗೊತ್ತೆ?

0
351

ಸನ್ಮಾರ್ಗ ವಾರ್ತೆ

ಅಮೆರಿಕ: ಆಧಾರ ರಹಿತ ಆರೋಪದಡಿ ಗೂಗಲ್, ಟ್ವಿಟರ್‌ ಹಾಗೂ ಫೇಸ್‌ಬು‌ಕ್‌ಗೆ ಸೆನೆಟ್‌ ವಾಣಿಜ್ಯ ಸಮಿತಿ ನೋಟಿಸ್‌ ಜಾರಿ ಮಾಡಿದೆ.

‘ನಮ್ಮ ಪಕ್ಷವನ್ನು ಉದ್ದೇಶಪೂರ್ವಕಾಗಿ ಸಂಪ್ರದಾಯವಾದಿ ಮತ್ತು ಧಾರ್ಮಿಕ ವಿರೋಧಿ ಎಂದು ಆಧಾರರಹಿತವಾಗಿ ದೂರಲಾಗುತ್ತಿದೆ‘ ಎಂದು ರಿಪಬ್ಲಿಕ್ ಸೆನೆಟರ್‌ಗಳು ಆಕ್ಷೇಪಿಸಿದ್ದಾರೆ.

ಈ ಸಂಬಂಧ ಟ್ವಿಟ್ಟರ್‌ನ ಸಿಇಒ ಜಾಕ್‌ ಡೊರ್ಸೆ, ಫೇಸ್‌ಬುಕ್‌ನ ಮಾರ್ಕ್ ಜ್ಯುಕರ್ ಬರ್ಗ್‌ ಮತ್ತು ಗೂಗಲ್‌ನ ಸುಂದರ್‌ ಪಿಚ್ಚೈ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೆನೆಟ್‌ ವಾಣಿಜ್ಯ ಸಮಿತಿ ನೋಟಿಸ್‌ ಜಾರಿ ಮಾಡಿದೆ.

ಲಿಖಿತ ಆದೇಶದ ಸೂಚನೆ ನಂತರ, ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಮಿತಿ ಎದುರು ಹಾಜರಾಗಲು ಮೂರು ಕಂಪನಿಗಳ ಸಿಇಒಗಳು ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಧ್ಯಕ್ಷೀಯ ಚುನಾವಣೆಗೆ ತಯಾರಾಗುತ್ತಿರುವ ಈ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷ ಮೂರು ಸಾಮಾಜಿಕ ಮಾಧ್ಯಮ ವೇದಿಕೆಗಳ ವಿರುದ್ಧ ಹೋರಾಟಕ್ಕೆ ಇಳಿದಿದೆ.