ದೇಶಾದ್ಯಂತ ಕೊರೋನ ವ್ಯಾಕ್ಸಿನ್ ವಿತರಣೆ ಆರಂಭ

0
449

ಸನ್ಮಾರ್ಗ ವಾರ್ತೆ

ಪುಣೆ,ಜ.12: ಕೊವಿಶೀಲ್ಡ್ ವ್ಯಾಕ್ಸಿನ್ ವಿತರಣೆ ದೇಶಾದ್ಯಂತ ಆರಂಭವಾಗಿದ್ದು ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಇದನ್ನು ಉತ್ಪಾದಿಸುತ್ತಿದೆ. ಬೆಳಗ್ಗೆ ಮೂರು ಟ್ರಕ್‍ಗಳಲ್ಲಿ ಪುಣೆಯ ವಿಮಾನ ನಿಲ್ದಾಣಕ್ಕೆ ಕೊಂಡು ಹೋಗಲಾಗುತ್ತಿದೆ. ವಿಮಾನಕ್ಕೆ ಕೊಂಡುಹೋಗುವ  ವಿಶೇಷ ಪೂಜಾ ಕಾರ್ಯಕ್ರಮವಿತ್ತು. ಎಂಟು ಪ್ಯಾಸೆಂಜರ್ ವಿಮಾನ, ಎರಡು ಕಾರ್ಗೋ ವಿಮಾನ ಸಹಿತ ಹತ್ತು ವಿಮಾನಗಳಲ್ಲಿ ದೇಶದ 13 ಸ್ಥಳಗಳಲ್ಲಿ ಆಕ್ಸ್‌ಫರ್ಡ್ ಕೊವಿಶೀಲ್ಡ್ ವಿತರಣೆ ನಡೆಯಲಿದೆ.

ದಿಲ್ಲಿ, ಕರ್ನಾಲ್. ಅಹ್ಮದಾಬಾದ್, ಚಂಡಿಗಡ್, ಲಕ್ನೊ, ಚೆನ್ನೈ, ಬೆಂಗಳೂರು, ಹೈದರಾಬಾದ್, ವಿಜಯವಾಡ, ಭುವನೇಶ್ವರ, ಕೊಲ್ಕತಾ, ಗುವಾಹಟಿ ಗುಜರಾತ್‍ಗಳಲ್ಲಿ ಆಕ್ಸ್‌ಫರ್ಡ್ ಕೊವಿಶೀಲ್ಡ್ ವಿತರಣೆ ನಡೆಯಲಿದೆ.

ಆಕ್ಸಫರ್ಡ್ ಕೊವಿಶೀಲ್ಡ್ ವ್ಯಾಕ್ಸಿನ್‍ಗೆ 200ರೂಪಾಯಿ ಬೆಲೆ ನಿಗದಿಗೆ ನಿನ್ನೆ ಸಹಮತ ವ್ಯಕ್ತವಾಗಿತ್ತು. ಮೊದಲ ಹಂತದಲ್ಲಿ 1.10 ಕೋಟಿ ಡೋಸ್‍ಗಳನ್ನು ತಕ್ಷಣದಿಂದ ವಿತರಿಸಲಾಗುವುದು. ಹತ್ತು ಕೋಟಿ ಡೋಸ್‍ಗಳಿಗೆ 200ರೂಪಾಯಿ ದರ ನಿಗದಿಯಾಗಿದೆ ಎಂಬುದಾಗಿ ವರದಿಯಾಗಿದೆ. ಕೊವಿಶೀಲ್ಡ್ ಮತ್ತು ಕೊವಾಕ್ಸಿನ್‍ಗೆ ತುರ್ತು ಅನುಮತಿಯನ್ನು ಸರಕಾರ ನೀಡಿದೆ.