ಹಣ ಪಡೆದು ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದ ಅಮಿತ್ ಮಾಳವೀಯ: ಮಾನನಷ್ಟ ಪ್ರಕರಣ ದಾಖಲು

0
1013

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 21; ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಶಾಹಿನ್ ಭಾಗ್‍ನ ಮಹಿಳೆಯರು ಹಣ ಪಡೆದು ಪ್ರತಿಭಟನಾ ಧರಣಿ ಮಾಡುತ್ತಿದ್ದಾರೆ ಎಂದು ಹೇಳಿದ್ದ ಬಿಜೆಪಿ ಐ ಟಿ ಸೆಲ್ ಅಧ್ಯಕ್ಷ ಅಮಿತ್ ಮಾಳವೀಯ ವಿರುದ್ಧ ಒಂದು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು ಪ್ರತಿಭಟನೆ ನಡೆಸುವ ಮಹಿಳೆಯರು ಹೂಡಿದ್ದಾರೆ.

ಶಾಹಿನ್ ಬಾಗ್‍ನ ಮಹಿಳೆಯರು ದಿನಾಲು 500 ರೂಪಾಯಿ ಹಣ ಪಡೆದು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಅಮಿತ್ ಮಾಳವೀಯ ಆರೋಪಿಸಿದ್ದರು. ಇದು ಸರಿಯೆಂದು ವಾದಿಸಿ ಒಂದು ವೀಡಿಯೊ ದೃಶ್ಯವನ್ನು ಮಾಳವೀಯ ಟ್ವಿಟರ್ ನಲ್ಲಿ ಹೊರಗೆ ಬಿಟ್ಟಿದ್ದರು. ಇದರ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಝಾಕಿರ ನಗರದ ನಫೀಸಾ ಬಾನು. ಶಾಹಿನ್ ಬಾಗಿನ ಶಹ್ಝಾದ್‍ ಫಾತಿಮಾ ಮಾನನಷ್ಟ ಅರ್ಜಿ ಕೋರ್ಟಿನಲ್ಲಿ ಮಾನನಷ್ಟ ಅರ್ಜಿ ದಾಖಲಿಸಿದ್ದು, ವಕೀಲರಾದ ಮಹ್ಮೂದ್ ಪ್ರಾಚ ಪ್ರತಿಭಟನಾಕಾರರ ಪರವಾಗಿ ಮಾಳವೀಯರಿಗೆ ನೋಟಿಸು ಕಳುಹಿಸಿದ್ದಾರೆ.

ಇದೇವೇಳೆ ಎನ್‍ಪಿ ಆರ್, ಸಿಎಎ ವಿರುದ್ಧ ಶಾಹಿನ್ ಭಾಗ ಹೋರಾಟ 36ನೇ ದಿವಸ ದಾಟಿದೆ.