ಆರ್ಥಿಕ ಬೆಳವಣಿಗೆ ದರ ಕುಸಿತ: ಇನ್ನು ಸಚಿವರುಗಳು ಗೀತಾ ಗೋಪಿನಾಥನ್ ವಿರುದ್ಧ ತಿರುಗಿ ಬೀಳಲಿದ್ದಾರೆ- ಚಿದಂಬರಂ

0
671

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 21: ಭಾರತದ ಆರ್ಥಿಕ ಬೆಳವಣಿಗೆ ದರ ಕುಸಿತವನ್ನು ಟೀಕಿಸಿದ ಐಎಂಎಫ್ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥನ್ ವಿರುದ್ಧ ಕೇಂದ್ರ ಸಚಿವರ ದಾಳಿಯಾಗಬಹುದು ಎಂದು ಕಾಂಗ್ರೆಸ್ ನಾಯಕ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಹೇಳಿದರು. 2019 ಆರ್ಥಿಕ ಬೆಳವಣಿಗೆ ಶೇ. 6.1ರಿಂದ ಶೇ. 4.8ಕ್ಕೆ ಕುಸಿದಿದೆ ಎಂದು ಐಎಂಎಫ್ ವರದಿ ತಿಳಿಸಿದೆ. ಮೂರು ತಿಂಗಳಲ್ಲಿ ಆರ್ಥಿಕ ಬೆಳವಣಿಗೆ ದರ ಶೇ. 1.3 ಕಡಿಮೆಯಾಗಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ್ತಿ ಗೀತಾ ಗೋಪಿನಾಥನ್ ತಿಳಿಸಿದ್ದರು. ಗೀತಾ ಮೋದಿ ಸರಕಾರದ ನೋಟು ನಿಷೇಧವನ್ನು ಟೀಕಿಸಿದ್ದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು ಆದ್ದರಿಂದ ಸಚಿವರುಗಳೆಲ್ಲ ಐಎಂಎಫ್ ಮತ್ತು ಗೀತಾ ಗೋಪಿನಾಥನ್‍ರನ್ನು ಟೀಕಿಸಲಿದ್ದಾರೆ. ಅದನ್ನು ಎದುರಿಸಲು ನಾವು ಸಿದ್ಧರಿರಬೇಕಾಗುತ್ತದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

2019-20ರಲ್ಲಿ ಆರ್ಥಿಕ ಬೆಳವಣಿಗೆ ದರ ಶೇ ಐದಕ್ಕಿಂತ ಕೆಳಗಿಳಿದಿದೆ ಎಂಬುದು ಸತ್ಯವಾಗಿದೆ. ಕೇಂದ್ರ ಸರಕಾರ ಹಲವು ಹೊರಗೆ ಹೊಳೆಯುವ ಕೆಲಸ ಮಾಡಿದರೂ ಶೇ. ಐದಕ್ಕೆ ತಲುಪಲು ಸಾಧ್ಯವಾಗಿಲ್ಲ. ಬೆಳವಣಿಗೆ ದರ ಇದಕ್ಕಿಂತ ಕಡಿಮೆಯಾದರೂ ಆಶ್ಚರ್ಯವಿಲ್ಲ ಎಂದು ಚಿಂದಂಬರಂ ಟೀಕಿಸಿದರು.