“ಮಾರ್ಗದರ್ಶಿ- ಆತ್ಮ ಸಂಸ್ಕರಣೆಯ ಪ್ರವಾದಿ(ಸ) ಬೋಧನೆಗಳು”: ಶಾಂತಿ ಪ್ರಕಾಶನದಿಂದ ನೂತನ ಕೃತಿ ಲೋಕಾರ್ಪಣೆ

0
461

ಸನ್ಮಾರ್ಗ ವಾರ್ತೆ

ಬೆಂಗಳೂರು: ಶಾಂತಿ ಪ್ರಕಾಶನದ 269ನೇ ಪುಸ್ತಕ ‘ಮಾರ್ಗದರ್ಶಿ- ಆತ್ಮ ಸಂಸ್ಕರಣೆಯ ಪ್ರವಾದಿ(ಸ) ಬೋಧನೆಗಳು’ ಎಂಬ ಕೃತಿಯನ್ನು ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರಾಧ್ಯಕ್ಷರಾದ ಸೈಯ್ಯದ್ ಸಾದಾತುಲ್ಲಾ ಹುಸೈನಿಯವರು ಬಿಡುಗಡೆಗೊಳಿಸಿದರು.

ಲೇಖಕ ಜ‌ಅ್‌ಫರ್ ಎಳಂಬಿಲಕ್ಕೋಡ್‌ರವರ  “ವಝಿ ವೆಲಿಚ್ಚಂ” ಬಹಳ ಪ್ರಸಿದ್ಧ ಕೃತಿಯಾಗಿದ್ದು , ಇದನ್ನು ಸಬೀಹಾ ಫಾತಿಮರವರು ಮಲಯಾಳಂ‌ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

ಕಾರ್ಯಕ್ರಮದ ವೇದಿಕೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನ ಪ್ರಧಾನ ಕಾರ್ಯದರ್ಶಿ ಟಿ.ಆರಿಫ್ ಅಲಿ, ಕಾರ್ಯದರ್ಶಿಗಳಾದ ಮೌಲಾನಾ ವಲೀಯುಲ್ಲಾಹ್ ಸಯೀದಿ ಫಲಾಹಿ, ಮೌಲಾನಾ ಇಕ್ಬಾಲ್ ಮುಲ್ಲಾ, ಜಮಾಅತೆ ಇಸ್ಲಾಮೀ ಕರ್ನಾಟಕ ರಾಜ್ಯಾಧ್ಯಕ್ಷರು ಮತ್ತು ಶಾಂತಿ ಪ್ರಕಾಶನದ ಅಧ್ಯಕ್ಷರಾದ ಡಾ. ಮುಹಮ್ಮದ್ ಸಾದ್ ಬೆಳಗಾಮಿ, ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞಿ ಇನ್ನಿತರರು ಉಪಸ್ಥಿತರಿದ್ದರು.