ಶಾರ್ಜ ಇಸ್ಲಾಮಿಕ್ ಆರ್ಟ್ ಪೆಸ್ಟಿವಲ್ ನಾಳೆ: ಹಲವು ವಿಶೇಷತೆಗಳು

0
830

ಸನ್ಮಾರ್ಗ ವಾರ್ತೆ-

ಶಾರ್ಜ, ಡಿ. 10: ಇಸ್ಲಾಮಿಕ್ ಕಲೆಯನ್ನು ಪ್ರದರ್ಶಿಸುವ ಜಗತ್ತಿನ ಅತ್ಯಂತ ಗಮನಾರ್ಹವಾಗಿರುವ 21ನೇ ಶಾರ್ಜ ಆರ್ಟ್ ಫೆಸ್ಟಿವಲ್ ಬುಧವಾರದಿಂದ ಶಾರ್ಜದಲ್ಲಿ ನಡೆಯಲಿದೆ. ಶಾರ್ಜದ ಆಡಳಿತಗಾರ ಶೇಖ್ ಡಾ. ಸುಲ್ತಾನ್ ಬಿನ್ ಮುಹಮ್ಮದ ಅಲ್ ಖಾಸ್ಮಿಯ ಪೋಷಕತ್ವದಲ್ಲಿ ಶಾರ್ಜ ಸರಕಾರದ ಸಾಂಸ್ಕøತಿಕ ವಿಭಾಗ ಇಸ್ಲಾಮೀ ಕಲೆ ಹಬ್ಬವನ್ನು ಆಯೋಜಿಸುತ್ತಿದೆ.

ಕಲಾವಿದರು, ಕಲಾಭಿಮಾನಿಗಳು ಒಟ್ಟು ಸೇರುವ ಮೇಳ ಇದಾಗಲಿದೆ ಎಂದು ಶಾರ್ಜ ಸಾಂಸ್ಕøತಿಕ ವಿಭಾಗ ಅಧ್ಯಕ್ಷ ಅಬ್ದುಲ್ಲ ಅಲ್ ಉವೈಸ್, ನಿರ್ದೇಶಕ ಮುಹಮ್ಮದ್ ಇಬ್ರಾಹೀಂ ಅಲ್ ಕಸೀರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜನುವರಿ 21ರವರೆಗೆ ಇಸ್ಲಾಮಿಕ್ ಕಲೋತ್ಸವ ನಡೆಯಲಿದೆ. ವಸ್ತುಪ್ರದರ್ಶನ, ಭಾಷಣ, ತರಬೇತಿ, ಪ್ರಮುಖರಿಂದ ಕಮ್ಮಟ ಸಹಿತ 253 ಕಾರ್ಯಕ್ರಮಗಳು ಇಲ್ಲಿ ಜರಗಲಿದೆ.

ಶಾರ್ಜ ಆರ್ಟ್ ಮ್ಯೂಸಿಯಂ, ಅಲ್ ಮಜಾಸ್ ವಾಟರ್ ಫ್ರಂಟ್, ಮರಾಯ ಆರ್ಟ್ ಸೆಂಟರ್ ಮುಂತಾದ ವೇದಿಕೆಗಳಲ್ಲಿ ಪ್ರದರ್ಶನ ನಡೆಯಲಿದೆ. ಹನ್ನೊಂದನೆ ತಾರೀಕು ಬೆಳಗ್ಗೆ ಹತ್ತು ಗಂಟೆಗೆ ಆರ್ಟ್ ಮ್ಯೂಸಿಯಂನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು 31 ದೇಶಗಳ 108 ಕಲಾವಿದರು ಈ ಸಲ ಭಾಗವಹಿಸುತ್ತಾರೆ. ಯುಎಇ, ಗಲ್ಫ್ ದೇಶಗಳಲ್ಲದೆ ಕೊಲಂಬಿಯ, ಇಟಲಿ, ಇಂಗ್ಲೆಂಡ್ ,ಅರ್ಜೆಂಟಿನಾ, ಬೆಲೂರಸ್, ಆಸ್ಟ್ರೇಲಿಯ ಗಳಿಂದ ಇಲ್ಲಿಗೆ ಈ ಸಲ ಕಲಾವಿದರು ಬರಲಿದ್ದಾರೆ.