ಮಳೆ: ಮಧ್ಯಪ್ರದೇಶದ ಒಂದು ಗ್ರಾಮವನ್ನೇ ನುಂಗಿಹಾಕುತ್ತಿರುವ ಸರ್ದಾರ್ ಆಣೆಕಟ್ಟಿನ ನೀರು

0
422

ಸನ್ಮಾರ್ಗ ವಾರ್ತೆ

ಇಂಧೋರ್,ಆ.26: ಭಾರೀ ಮಳೆಯ ಹಿನ್ನೆಲೆಯಲ್ಲಿ ಗುಜರಾತಿನ ಸರ್ದಾರ್ ಸರೋವರ ಆಣೆಕಟ್ಟಿನ ನೀರು ಹೆಚ್ಚಿದ್ದು ಸಮೀಪದ ಮಧ್ಯಪ್ರದೇಶದ ಧಾರ ಜಿಲ್ಲೆಯ ನಿಸಾರ್‍ಪುರ ಗ್ರಾಮ ಭೀತಿಯಲ್ಲಿದೆ. ಇಂಧೋರಿನಿಂದ 180 ಕಿಲೊ ಮೀಟರ್ ದೂರದಲ್ಲಿರುವ ಈ ಗ್ರಾಮ ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಲಿದೆ ಎಂದು ವರದಿಯಾಗಿದೆ. ಆಣೆಕಟ್ಟಿನ ನೀರು ಅಪಾಯ ರೇಖೆಯನ್ನು ಮೀರಿ 6.5 ಮೀಟರ್ ಸಂಗ್ರಹವಾಗಿದೆ.

ಆಣೆಕಟ್ಟಿನ ನೀರು ಸಮೀಪದ ಗ್ರಾಮದಲ್ಲಿ ಪ್ರವಾಹ ಸೃಷ್ಟಿಸಿದೆ. ಉರಿ ಬಘನಿ ನದಿ ತಟದ ಗ್ರಾಮಗಳ ಸಾವಿರ ಮಂದಿ ಸಿಕ್ಕಿದ್ದೆಲ್ಲ ಹೆಕ್ಕಿಕೊಂಡು ಮನೆ ತೊರೆಯುತ್ತಿದ್ದಾರೆ. 20 ದಿವಸಗಳಿಂದ ನಿರಂತರ ಪ್ರವಾಹ ಹೆಚ್ಚುತ್ತಿದೆ. ಆಣೆಕಟ್ಟಿನಿಂದ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ಸ್ಥಳೀಯ ಸಂಘಟನೆಯೊಂದರ ನಾಯಕ ದೇವೇಂದ್ರ ಕುಮಾರ್ ತಿಳಿಸಿದ್ದಾರೆ.
ಮಳೆ ತೀವ್ರಗೊಂಡು, ನರ್ಮದಾ ಮತ್ತು ಉರಿ ಬಘನಿ ಸಹಿತ ಪೋಷಕ ನದಿಗಳ ಅಣೆಕಟ್ಟುಗಳನ್ನು ತೆರೆದು ಬಿಡಲಾಗಿದೆ. ಜನರು ಶೀಘ್ರದಲ್ಲಿ ಮನೆ ತೆರವು ಗೊಳಿಸಬೇಕೆಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸಂತ್ರಸ್ತರಿಗೆ ಶಿಬಿರದ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಸರಕಾರದ ನಷ್ಟಪರಿಹಾರ ಮತ್ತು ಪುನರ್ವಸತಿಯಲ್ಲಿರುವ ಕೊರತೆಗಳ ಕುರಿತು ಜನ ರೊಚ್ಚಿಗೆದ್ದಿದ್ದಾರೆ.