ಈ ವರ್ಷಾಂತ ಟರ್ಕಿಯ ಮೊದಲ ಜನಪರ ಸಂವಿಧಾನ- ಉರ್ದುಗಾನ್

0
651

ಸನ್ಮಾರ್ಗ ವಾರ್ತೆ

ಅಂಕಾರ: ಹೊಸ ಸಂವಿಧಾನ ದೇಶವನ್ನು ಹೆಚ್ಚು ಪ್ರಜಾಪ್ರಭುತ್ವೀಕರಿಸಲಿದೆ ಎಂದು ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಹೇಳಿದರು. ಹೊಸ ಸಂವಿಧಾನ ರಚನೆ ಅಂತಿಮ ಹಂತದಲ್ಲಿದೆ. ಈ ವರ್ಷದ ಕೊನೆಯಲ್ಲಿ ಅದು ಪೂರ್ಣವಾಗಲಿದೆ. 2022ರಲ್ಲಿ ಅದನ್ನು ಸಾರ್ವಜನಿಕ ಚರ್ಚೆಗೆ ಲಭ್ಯಗೊಳಿಸಲಾಗುವುದು ಎಂದು ಉರ್ದುಗಾನ್ ತಿಳಿಸಿದ್ದು ಅವರ ನೇತೃತ್ವದ ಎಕೆ ಪಾರ್ಟಿ ಸಂವಿಧಾನ ರಚನಾ ಕಾರ್ಯ ನೋಡಿಕೊಳ್ಳುತ್ತಿದೆ.

ಬೇರೆ ಪಾರ್ಟಿಗಳ ನಿರ್ದೇಶ ಅಭಿಪ್ರಾಯಗಳೊಂದಿಗೆ ಸಮನ್ವಯ ಸಾಧ್ಯವಾದರೆ ಈ ವರ್ಷ ಕೊನೆಯಲ್ಲಿ ಟರ್ಕಿಯ ಮೊದಲ ಜನಪರ ಸಂವಿಧಾನ ಪೂರ್ಣರೂಪುಗೊಳ್ಳುತ್ತದೆ ಎಂದು ಉರ್ದುಗಾನ್ ಹೇಳಿದರು.

ಸಂವಿಧಾನದ ಮೊದಲ ನಾಲ್ಕು ಅಧ್ಯಾಯಗಳಿಗೆ ಸಂಬಂಧಿಸಿ ಪ್ರತಿಪಕ್ಷ ಮತ್ತು ಆಡಳಿತ ಪಕ್ಷ ಎಕೆ ಪಾರ್ಟಿಯ ನಡುವೆ ಭಿನ್ನಾಭಿಪ್ರಾಯಗಳಿವೆ. ಇದೇ ವೇಳೆ ಸಂವಿಧಾನಕ್ಕೆ ಸಂಬಂಧಿಸಿ ಪಾರ್ಟಿಗಳ ನಡುವೆ ಸಮನ್ವಯದ ಯತ್ನ ಊಜಿರ್ತದಲ್ಲಿದೆ.

2016ರ ಸೈನಿಕ ಬುಡಮೇಲು ಕೃತ್ಯವನ್ನು ವಿಫಲಗೊಳಿಸಿದ ಬಳಿಕ ತುರ್ತು ಪರಿಸ್ಥಿತಿ ಸಹಿತ ಕ್ರಮಗಳಿಗೆ ಉರ್ದುಗಾನ್ ತೆರಳಿದರು. 2017ರ ಜನಮತ ಸಂಗ್ರಹದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮತ್ತು ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರವನ್ನು ಕೇಂದ್ರೀಕರಿಸಲಾಗಿತ್ತು. ಅಧ್ಯಕ್ಷರಿಗೆ ಹೆಚ್ಚು ಅಧಿಕಾರ ನೀಡುವುದರ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು. ನಾಲ್ಕು ವರ್ಷಗಳ ಬಳಿಕ ಹೊಸ ಸಂವಿಧಾನಕ್ಕೆ ಉರ್ದುಗಾನ್ ಮುಂದಾಗಿದ್ದರು.