ಸಿಖ್ ಸಾಮೂಹಿಕ ಹತ್ಯೆ: ತೀರ್ಪನ್ನು ಸ್ವಾಗತಿಸಿದ ಮುಸ್ಲಿಮ್ ಸಂಘಟನೆಗಳು

0
643

ಹೊಸದಿಲ್ಲಿ: ಸಿಖ್ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್‍ಗೆ ಕೋರ್ಟು ನೀಡಿದ ಶಿಕ್ಷೆಯನ್ನು ಅಖಿಲ ಭಾರತ ಮಜ್ಲಿಸೆ ಮುಶಾವರ ಸ್ವಾಗತಿಸಿದೆ. ಅಲ್ಪಸಂಖ್ಯಾತರನ್ನು ಬೇಟೆಯಾಡಿದ ಮುಂಬೈ, ಗುಜರಾತ್,ಕಂಧಮಾಲ್, ಮುಝಫ್ಫರ್ ನಗರ ಗಲಭೆಯ ಕುರಿತು ತೀರ್ಪಿನಲ್ಲಿ ಪರಾಮಾರ್ಶೆ ನಡೆಸಿದ್ದು ಉಚಿತವಾಗಿದೆ ಎಂದು ಸಂಘಟನೆಯ ಅಧ್ಯಕ್ಷ ನವಾಯ್ದ್ ಹಾಮಿದ್ ಹೇಳಿದರು.

ಕೋಮು ಹತ್ಯೆಗೆ ವಿರೋಧಿಸಿ ಪಾರ್ಲಿಮೆಂಟಿನಲ್ಲಿ ಕಾನೂನು ಪಾಸು ಮಾಡಬೇಕೆಂದು ಅವರು ಆಗ್ರಹಿಸಿದರು.ಶಕ್ತಿಶಾಲಿ ರಾಜಕಾರಣಿ ಸಿಖ್ ಗಲಭೆಯ ಹಿಂದಿದ್ದರು ಎಂದು ದಿಲ್ಲಿ ಹೈಕೋರ್ಟು ತಿಳಿಸಿದೆ ಎಂದು ಮುಸ್ಲಿಂ ಪೊಲಿಟಿಕಲ್ ಕೌನ್ಸಿಲ್ ಆಫ್ ಇಂಡಿಯ ಇದರ ಅಧ್ಯಕ್ಷ ಡಾ. ತಸ್ಲೀಮ್ ರಹ್ಮಾನಿ ಹೇಳಿದರು.

ಬಾಬರಿ ಮಸೀದಿ ಧ್ವಂಸ ಮತ್ತು ಗುಜರಾತ್ ಗಲಭೆಯಲ್ಲಿಯೂ ಇದೇ ಅವಸ್ಥೆಯಿತ್ತು. ನಿರಂತರ ಕಾನೂನು ಹೋರಾಟದ ಕೊನೆಯಲ್ಲಿ ಸಿಖ್ ಸಮುದಾಯಕ್ಕೆ ನ್ಯಾಯ ದೊರಕಿದೆ ಎಂದರು. ಈ ಪ್ರಕರಣಗಳಲ್ಲಿ ಇಂತಹದೊಂದು ಕಾನೂನು ಹೋರಾಟ ನಡೆಸಲು ಮುಸ್ಲಿಂ ಸಮುದಾಯಕ್ಕೆ ಸಾಧ್ಯವಿಲ್ಲ.

ಬಾಬರಿ ಮಸೀದಿ ಪ್ರಕರಣಕ್ಕೆ 26 ವರ್ಷ ಆಗಿದೆ. ಅದೀಗಲೂ ಸೆಶನ್ಸ್ ಕೋರ್ಟಿನಲ್ಲಿದೆ. ಆದರೆ, ಸಮುದಾಯದ ನಾಯಕರಿಗೆ ಈ ಪ್ರಕರಣದ ಇಂದಿನ ಅವಸ್ಥೆ ಹೇಗಿದೆ ಎಂದು ಗೊತ್ತಿಲ್ಲ. ಪ್ರಕರಣ ಆರೋಪಿಗಳು ಉಪಪ್ರಧಾನಿ, ಕೇಂದ್ರ ಸಚಿವರು ಮತ್ತು ರಾಜ್ಯಪಾಲರು ಆದರು. ಆದರೆ ಸಮುದಾಯದಿಂದ ಇದಕ್ಕೆ ಸಣ್ಣ ಪ್ರತಿಭಟನೆ ಕೂಡ ನಡೆಯಲಿಲ್ಲ ಎಂದು ಅವರು ಹೇಳಿದರು.