ಏಕ ರಾಷ್ಟ್ರ, ಏಕ ಚುನಾವಣೆ ಪ್ರಾಯೋಗಿಕವಲ್ಲ- ಚುನಾವಣಾ ಆಯೋಗ

0
643

ಹೊಸದಿಲ್ಲಿ, ಜೂ. 21: ಏಕ ರಾಷ್ಟ್ರ, ಏಕ ಚುನಾವಣೆ ನೀತಿ ಈಗ ಪ್ರಾಯೋಗಿಕವಾದದ್ದಲ್ಲ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಸಂಸತ್ತು, ವಿಧಾನಸಭೆ ಚುನಾವಣೆಗಳನ್ನು ಒಂದೇ ಬಾರಿ ನಡೆಸುವ ಕುರಿತು ಕಳೆದಿ ದವಸ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷ ಸಭೆ ಕರೆದಿದ್ದರು. ರಾಜಕೀಯ ಪಕ್ಷಗಳ ಬಹಿಷ್ಕಾರದ ಮೂಲಕ ಈ ಸಭೆ ಹೆಚ್ಚು ಗಮನವನ್ನು ಆಕರ್ಷಿಸಿತ್ತು.

ಏಕ ರಾಷ್ಟ್ರ, ಏಕ ಚುನಾವಣೆ ಪ್ರಾಯೋಗಿವಾಗಿಕವಾಗಿರುತ್ತಿದ್ದರೆ ಈ ಸಲವೇ ಚುನಾವಣಾ ಆಯೋಗ ವಿಧಾನಸಭಾ ಚುನಾವಣೆಯನ್ನೂ ನಡೆಸುತ್ತಿತ್ತು. ಒಟ್ಟಿಗೆ ಚುನಾವಣೆ ನಡೆಸಿದರೆ ಸೃಷ್ಟಿಯಾಗುವ ಕಾನೂನು ಶಿಸ್ತು ಸಮಸ್ಯೆಯೇ ದೊಡ್ಡ ಸವಾಲು ಆಗಿದೆ. ದೇಶಾದ್ಯಂತ ಸೇನೆ ವಿನ್ಯಾಸಗೊಳಿಸುವ ಪರ್ಯಾಪ್ತತೆ ಕೂಡಾ ಸಮಸ್ಯೆಯಾಗಬಹುದು. ದೇಶದಲ್ಲಿ 90 ಕೋಟಿಗೂ ಅಧಿಕ ಮತದಾರರು ಇದ್ದಾರೆ. ಏಕ ಸಮಯದಲ್ಲಿ ಚುನಾವಣಾ ಸಾಮಗ್ರಿ ಒಯ್ಯುವುದು ಕೂಡ ಸಮಸ್ಯೆಯಾಗಬಹುದು ಎಂದು ಮೂಲಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಒಂದೇ ಚುನಾವಣೆಯಲ್ಲಿ ಪ್ರಯೋಜನ ಮತ್ತು ನಷ್ಟವೂ ಇದೆ ಎಂದು ಮಾಜಿ ಚುನಾವಣಾ ಆಯುಕ್ತ ಎಸ್‍ ವೈ ಕುರೇಶಿ ಹೇಳಿದಾರೆ. ಆರ್ಥಿಕ ಲಾಭ, ಕೆಲಸದ ದಿನಕ್ಕೆ ಅಡಚಣೆಯಾಗುವುದು ತಪ್ಪುತ್ತದೆ. ಆದರೆ ಜಾತಿವಾದ, ಭ್ರಷ್ಟಾಚಾರ ಚುನಾವಣೆಯ ವೇಳೆ ಸಾಮಾನ್ಯವಾಗಿದೆ. ಒಂದೇ ಚುನಾವಣೆಯಲ್ಲಿ ಇದು ಹೆಚ್ಚುವ ಅಪಾಯವಿದೆ ಎಂದು ಅವರು ಹೇಳಿದ್ದಾರೆ. ಇನ್ನು ರಾಷ್ಟ್ರಕ್ಕೆ ಪ್ರಧಾನ್ಯತೆ ನೀಡಿ ಫೆಡರಲಿಸಂ ಹಿತವನ್ನು ಕಡೆಗಣಿಸುವುದು ಇದರಲ್ಲಿ ದೊಡ್ಡ ಸಮಸ್ಯೆಯಾಗಿದೆ ಎಂದಿದ್ದಾರೆ.