✍️ ಇಷಲ್
ಎಸ್ಐಆರ್ ಅಂತಿಮ ಪಟ್ಟಿ ಹೊರ ಬಿದ್ದಿದೆ. ವಿಶೇಷ ಏನೆಂದರೆ ರಾಜ್ಯದ ಪ್ರಮುಖ ರಾಜಕಾರಣಿಗಳು ಈ ಹಿಂದೆ ಎಷ್ಟು ಮತಗಳ ಅಂತರದಿಂದ ಗೆದ್ದಿದ್ದರೋ ಈಗ ಅದಕ್ಕಿಂತಲೂ ಹೆಚ್ಚು ಮಂದಿ ಮತದಾರರನ್ನು ಅವರ ಕ್ಷೇತ್ರದಿಂದ ಕೈ ಬಿಡಲಾದ ಮಾಹಿತಿ ಹೊರ ಬಿದ್ದಿದೆ.
ಮುಖ್ಯವಾಗಿ ಕಾಂಗ್ರೆಸ್ಸಿನ ಎಂಬಿ ಪಾಟೀಲ್ ಈಶ್ವರ ಖಂಡ್ರೆ ಪ್ರಿಯಾಂಕ ಖರ್ಗೆ ಬಿಜೆಪಿಯ ಬಿ ವೈ ವಿಜಯೇಂದ್ರ ಆರ್ ಅಶೋಕ್ ಜೆಡಿಎಸ್ ನ ಹೆಚ್ ಡಿ ಕುಮಾರಸ್ವಾಮಿ ಅವರು ಈ ಸಾಲಿನಲ್ಲಿದ್ದಾರೆ. ಆದರೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಮತ್ತು ಸತೀಶ್ ಜಾರಕಿಹೊಳಿ ಅವರ ಕ್ಷೇತ್ರಗಳಲ್ಲಿ ಅವರ ಗೆಲುವಿನ ಅಂತರಕ್ಕಿಂತ ಕಡಿಮೆ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ.
ಎಂ ಬಿ ಪಾಟೀಲ್ ಅವರ ಬಬಲೇಶ್ವರ ಕ್ಷೇತ್ರದಲ್ಲಿ ಎಸ್ಐಆರ್ ಗೂ ಮುನ್ನ 2,25,000 ಮತದಾರರು ಇದ್ದರು. ಈಗ ಇವರ ಸಂಖ್ಯೆ 2, 30000ಕ್ಕೆ ಕುಸಿದಿದೆ. ಈ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರನ್ನು ಸಾಮೂಹಿಕವಾಗಿ ತೆಗೆದುಹಾಕಲು 6,500 ರಷ್ಟು ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ ಅದನ್ನು ತಿರಸ್ಕರಿಸಲಾಯಿತು. ಮಾತ್ರ ಅಲ್ಲ ಹೀಗೆ ಅರ್ಜಿ ಸಲ್ಲಿಸಿದ ಬಿಜೆಪಿ ನಾಯಕ ಬಂಧನದ ಭಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು . ಹೀಗಿದ್ದರೂ ಹಿಂದಿನ ಚುನಾವಣೆಯಲ್ಲಿ ಎಂಬಿ ಪಾಟೀಲ್ ಅವರ ಗೆಲುವಿನ ಅಂತರಕ್ಕಿಂತ ಹೆಚ್ಚು ಮತದಾರರನ್ನು ತೆಗೆದುಹಾಕಲಾಗಿದೆ. ಕಳೆದ ಚುನಾವಣೆಯಲ್ಲಿ ಎಂಬಿ ಪಾಟೀಲ್ ಅವರು 15,216 ಮತಗಳ ಅಂತರದಿಂದ ಗೆದ್ದಿದ್ದರು. ಆದರೆ ಎಸ್ಐಆರ್ ಪ್ರಕ್ರಿಯೆಯಲ್ಲಿ 21,890 ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ.
ಎಚ್ ಡಿ ಕುಮಾರಸ್ವಾಮಿ ಅವರು 2023ರ ಚುನಾವಣೆಯಲ್ಲಿ ೆದ್ದಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಎಸ್ಐಆರ್ಗು ಮುನ್ನ 2,35,000 ಮಂದಿ ಮತದಾರರು ಇದ್ದರು. ಈಗ ಇವರ ಸಂಖ್ಯೆ ಎರಡು ಲಕ್ಷದ 14 ಸಾವಿರಕ್ಕೆ ಕುಸಿದಿದೆ. 15,915 ಮತಗಳ ಅಂತರದಿಂದ ಕುಮಾರಸ್ವಾಮಿ ಜಯಗಳಿಸಿದ್ದರು. ಆದರೆ ಇದೀಗ 21,351 ಮಂದಿಯ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ.
ಸಚಿವ ಈಶ್ವರ ಖಂಡ್ರೆ ಅವರ ಬಾಲ್ಕಿ ಕ್ಷೇತ್ರದಲ್ಲಿ ಎಸ್ಐಆರ್ಗು ಮುನ್ನ ಎರಡು ಲಕ್ಷದ 43 ಸಾವಿರ ಮಂದಿ ಮತದಾರರು ಇದ್ದರು. ಈಗ ಇವರ ಸಂಖ್ಯೆ 2,15,000ಕ್ಕೆ ಕುಸಿದಿದೆ. ಈ ಕ್ಷೇತ್ರದಲ್ಲಿ ಸಾಮೂಹಿಕವಾಗಿ ಮುಸ್ಲಿಂ ಮತದಾರರನ್ನು ತೆಗೆದು ಹಾಕಲು 4,800ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ ಈ ಅರ್ಜಿಗಳನ್ನು ತಿರಸ್ಕರಿಸಲಾಯಿತು. ಹೀಗಿದ್ದರೂ ಹಿಂದಿನ ಚುನಾವಣೆಯಲ್ಲಿ ಈಶ್ವರ್ ಖಂಡ್ರೆ ಅವರ ಗೆಲುವಿನ ಅಂತರಕ್ಕಿಂತ ಹೆಚ್ಚು ಮತದಾರರನ್ನು ಎಸ್ ಐ ಆರ್ ನಲ್ಲಿ ತೆಗೆದು ಹಾಕಲಾಗಿದೆ. 27, 706 ಮತಗಳ ಅಂತರದಿಂದ 2023ರ ಅಸೆಂಬ್ಲಿ ಚುನಾವಣೆಯಲ್ಲಿ ಈಶ್ವರ್ ಖಂಡ್ರೆ ಗೆಲುವು ದಾಖಲಿಸಿದ್ದರು . ಆದರೆ ಇದೀಗ 28,547 ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ.
ಪ್ರಿಯಾಂಕ ಖರ್ಗೆ ಅವರ ಚಿತ್ತಾಪುರ ಕ್ಷೇತ್ರದಲ್ಲಿ ಎಸ್ಐಆರ್ಗು ಮುನ್ನ 2,51,000 ಮತದಾರರು ಇದ್ದರು. ಈಗ ಇವರ ಸಂಖ್ಯೆ ಎರಡು ಲಕ್ಷಕ್ಕೆ ಕುಸಿದಿದೆ. 2023 ರ ಅಸೆಂಬ್ಲಿ ಚುನಾವಣೆಯಲ್ಲಿ 13,640 ಮತಗಳ ಅಂತರದಿಂದ ಪ್ರಿಯಾಂಕ್ ಖರ್ಗೆ ಗೆಲುವು ಸಾಧಿಸಿದ್ದರು. ಆದರೆ ಇದೀಗ 50,839 ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಮೂಲಕ ಗೆಲುವಿನ ಅಂತರಕ್ಕಿಂತ ಹೆಚ್ಚು ಮತದಾರರನ್ನು ತೆಗೆದುಹಾಕಲಾಗಿದೆ.
ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಅವರ ಶಿಕಾರಿಪುರ ಕ್ಷೇತ್ರದಲ್ಲಿ ಎಸ್ಐಆರ್ಗು ಮುನ್ನ ಮುನ್ನ ಎರಡು ಲಕ್ಷದ 6000 ಮತದಾರರು ಇದ್ದರು. ಈಗ ಅವರ ಸಂಖ್ಯೆ 1 ಲಕ್ಷದ 86 ಸಾವಿರಕ್ಕೆ ಕುಸಿದಿದೆ. 2023ರ ಅಸೆಂಬ್ಲಿ ಚುನಾವಣೆಯಲ್ಲಿ ಹನ್ನೊಂದು ಸಾವಿರದ ಎಂಟು ಮತಗಳ ಅಂತರದಿಂದ ವಿಜಯೇಂದ್ರ ಗೆಲುವು ಸಾಧಿಸಿದ್ದರು. ಆದರೆ ಇದೀಗ ಇಪ್ಪತ್ತು ಸಾವಿರದ 463 ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಈ ಮೂಲಕ ಗೆಲುವಿನ ಅಂತರಕ್ಕಿಂತ ಹೆಚ್ಚು ಮತದಾರರನ್ನು ತೆಗೆದುಹಾಕಲಾಗಿದೆ.
ಪ್ರಿಯಾಂಕ ಖರ್ಗೆ ಅವರ ಕ್ಷೇತ್ರದಲ್ಲಿ ತೆಗೆದುಹಾಕಲಾದ ಮತದಾರರ ಸಂಖ್ಯೆ ಉಳಿದ ಎಲ್ಲರಿಗಿಂತಲೂ ಹೆಚ್ಚಿದೆ. ಅವರು ಕಳೆದ ಬಾರಿ 13,640 ಮತಗಳ ಅಂತರದಿಂದ ಗೆದ್ದಿದ್ದರು. ಆದರೆ ಈಗ 50,839 ಮತದಾರರನ್ನು ತೆಗೆದುಹಾಕಲಾಗಿದೆ.
ಆದ್ದರಿಂದ ಮುಂದಿನ ಅಸೆಂಬ್ಲಿ ಚುನಾವಣೆಯು ಈ ಎಲ್ಲಾ ನಾಯಕರ ಪಾಲಿಗೆ ನಿರ್ಣಾಯಕವಾಗಲಿದೆ.












