ಬಾಂಗ್ಲಾದೇಶಿ ನುಸುಳುಕೋರರು ಎಲ್ಲಿದ್ದಾರೆ? ಅಂತಿಮ ಪಟ್ಟಿಯ ಬಳಿಕ ಬಿಜೆಪಿಗೆ ಮುಜುಗರ

0
290

✍️ ಮಿಷಲ್

ಬಾಂಗ್ಲಾದೇಶ ನುಸುಳುಕೋರರನ್ನು ಮತದಾರರ ಪಟ್ಟಿಯಿಂದ ಹೊರ ಹಾಕುವುದಕ್ಕಾಗಿ ಎಸ್ಐಆರ್ ನಡೆಸಲಾಗ್ತಾ ಇದೆ ಎಂಬ ಪ್ರಚಾರವನ್ನು ಬಿಜೆಪಿ ಉದ್ದಕ್ಕೂ ಮಾಡುತ್ತಾ ಬಂದಿತ್ತು. ಕರ್ನಾಟಕದಲ್ಲೂ ಎಸ್ ಐ ಆರ್ ಅನ್ನು ಸಮರ್ಥಿಸಿಕೊಳ್ಳುವಾಗ ಅದರ ನಾಯಕರು ಮತ್ತು ಕಾರ್ಯಕರ್ತರು ಇಂತಹ ವಾದವನ್ನು ಮುಂದಿಟ್ಟಿದ್ದರು. ಈ ನುಸುಳು ಕೊರರಿಂದ ಕಾಂಗ್ರೆಸ್ ಲಾಭ ಪಡೆಯುತ್ತಿದೆ, ಆದ್ದರಿಂದಲೇ ಅದು ವಿರೋಧಿಸುತ್ತಿದೆ ಎಂದು ಹೇಳ್ತಾ ಇದ್ದರು. ಆದರೆ ಇದೀಗ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಮುಗಿದಿದೆ. ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಿದೆ ಈ ಬಿಡುಗಡೆಗೊಂಡ ಪಟ್ಟಿಯನ್ನು ನೋಡಿದ್ರೆ ಎಸ್ಐಆರ್ ಪ್ರಕ್ರಿಯೆ ನಿಜಕ್ಕೂ ನಡೆಸಿರುವುದು ಏಕೆ ಎಂಬ ಪ್ರಶ್ನೆ ಕೇಳುವಂತಾಗಿದೆ.

ಎಸ್ಐಆರ್ ಪ್ರಕ್ರಿಯೆ ಅಡಿಯಲ್ಲಿ ರಾಜ್ಯಾದ್ಯಂತ ಪತ್ತೆಯಾದ ವಿದೇಶಿ ಮತದಾರರ ಸಂಖ್ಯೆ ಎಷ್ಟಿರಬಹುದು? ಇಂಥದೊಂದು ಪ್ರಶ್ನೆ ನಿಮ್ಮಲ್ಲೂ ಇರಬಹುದು. ಇದಕ್ಕೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಅನ್ ಬುಕುಮಾರ್ ಅವರೇ ಉತ್ತರ ನೀಡಿದ್ದಾರೆ. ರಾಜ್ಯದಲ್ಲಿ ಪತ್ತೆಯಾದ ವಿದೇಶಿ ಮತದಾರರ ಸಂಖ್ಯೆ ಸಾವಿರಕ್ಕಿಂತ ಕಡಿಮೆ ಎಂದು ಇವರು ಹೇಳಿದ್ದಾರೆ.

ರಾಜ್ಯದಲ್ಲಿ ಒಟ್ಟು 771 ವಿದೇಶಿ ಪ್ರಜೆಗಳು ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಪೈಕಿ ನೇಪಾಳದ ಪ್ರಜೆಗಳ ಸಂಖ್ಯೆಯೇ 688ರಷ್ಟಿದೆ. ರಾಜ್ಯದಲ್ಲಿ ಬಾಂಗ್ಲಾದೇಶದ ಏಕೈಕ ಪ್ರಜೆ ಪತ್ತೆಯಾಗಿದ್ದಾರೆ. ಜೊತೆಗೆ ಆಸ್ಟ್ರೇಲಿಯ ಅಮೆರಿಕ ಕೆನಡಾ ರಷ್ಯಾದ ಪ್ರಜೆಗಳು ಮತದಾರರಾಗಿದ್ದು ಪತ್ತೆಯಾಗಿದೆ. 580 ವಿದೇಶಿ ಪ್ರಜೆಗಳು ಕೇವಲ ಬೆಂಗಳೂರು ಉತ್ತರ ಚುನಾವಣಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಇದ್ದರು. ಈ ಪೈಕಿ 542 ಪ್ರಜೆಗಳು ಕೇವಲ ನೇಪಾಳದವರೇ ಆಗಿದ್ದರು.

ಇನ್ನೊಂದಡೆ ಕೇವಲ ದಕ್ಷಿಣ ಕನ್ನಡ ಜಿಲ್ಲೆಯನ್ನು ತೆಗೆದುಕೊಂಡರೆ ಇಲ್ಲಿ ಒಟ್ಟು 40 ಮಂದಿ ವಿದೇಶಿ ಪ್ರಜೆಗಳು ಪತ್ತೆಯಾಗಿದ್ದಾರೆ. ಇವರಲ್ಲಿ 17 ಮಂದಿ ನೇಪಾಳದ ಪ್ರಜೆಗಳು. ಐದು ಮಂದಿ ಕೆನಡಾದ ಪ್ರಜೆಗಳು. ಆಸ್ಟ್ರೇಲಿಯ ಮತ್ತು ಅಮೆರಿಕಾದ ತಲಾ ಆರು ಮಂದಿ ಪ್ರಜೆಗಳು. ನೆದರ್ಲ್ಯಾಂಡ್ ಸೌತ್ ಆಫ್ರಿಕಾ ನಾರ್ವೆ ಮುಂತಾದ ರಾಷ್ಟ್ರಗಳ ಒಬ್ಬೊಬ್ಬ ಪ್ರಜೆಗಳು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು . ಹೀಗೆ ಒಟ್ಟು ದಕ್ಷಿಣ ಕನ್ನಡದಲ್ಲಿ 40 ಮಂದಿ ವಿದೇಶಿ ಪ್ರಜೆಗಳು ಪತ್ತೆಯಾಗಿದ್ದಾರೆ ಆದರೆ ಒಬ್ಬನೇ ಒಬ್ಬ ಬಾಂಗ್ಲಾದೇಶಿ ಪ್ರಜೆ ಪತ್ತೆಯಾಗಿಲ್ಲ.

ಎಸ್ ಐ ಆರ್ ಅನ್ನು ಈವರೆಗೆ ಬಿಜೆಪಿ ಸಮರ್ಥಿಸಿದ್ದೆ ಬಾಂಗ್ಲಾದೇಶಿ ಪ್ರಜೆಗಳನ್ನು ತೋರಿಸಿ. ಆದರೆ ರಾಜ್ಯದಲ್ಲಿ 688 ಮಂದಿ ನೇಪಾಳದ ಪ್ರಜೆಗಳು ಪತ್ತೆಯಾಗಿದ್ದಾರೆ, ಹೊರತು ಬಾಂಗ್ಲಾದೇಶಿಗಳಲ್ಲ. ಒಬ್ಬನೇ ಒಬ್ಬ ಬಾಂಗ್ಲಾದೇಶಿ ಪ್ರಜೆ ರಾಜ್ಯದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು .

ಹಾಗಿದ್ರೆ ಈವರೆಗೆ ಬಿಜೆಪಿ ಹೇಳಿದ್ದೇನು? ಅದು ರಾಜ್ಯದ ಮತದಾರರ ದಿಕ್ಕು ತಪ್ಪಿಸಿದ್ದೇಕೆ? ಸುಳ್ಳು ಹೇಳಿದ್ದೇಕೆ? ಈ ಬಗ್ಗೆ ಉತ್ತರ ಕೊಡಬೇಕಾದ ಅಗತ್ಯ ಇದೆ.