ಮೆಲ್ಕಾರ್: ಸ್ನೇಹ ಸ್ಟಡಿ ಸೆಂಟರ್ ಉದ್ಘಾಟನೆ

0
405

ಸನ್ಮಾರ್ಗ ನ್ಯೂಸ್

ಮೆಲ್ಕಾರ್: ವಿದ್ಯಾರ್ಥಿ ಯುವಕರಲ್ಲಿ ಸಹನೆ, ಸಂಯಮ ಅತ್ಯಗತ್ಯ. ದುಡುಕುತನ ಅವರಲ್ಲಿರಬಾರದು.  ವಿದ್ಯಾರ್ಥಿಗಳು ಕೆಡುಕಿನಿಂದ ದೂರವಾಗಿ ಸಮಾಜಕ್ಕೆ ಬೆಳಕಾಗಬೇಕೆಂದು ಹವ್ವಾ ಜುಮ್ಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಳ್ ರವರು ಹೇಳಿದರು.

ಇಲ್ಲಿನ ಸುಲ್ತಾನ್ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್.ಐ.ಒ) ಪಾಣೆಮಂಗಳೂರು ಶಾಖೆಯ ನೂತನ ಕಛೇರಿಯಾದ ಸ್ನೇಹ ಸ್ಟಡಿ ಸೆಂಟರ್ ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್(ಜೆ.ಐ.ಹೆಚ್) ದ.ಕ. ಜಿಲ್ಲಾ ಸಂಚಾಲಕ ಸಈದ್ ಇಸ್ಮಾಯೀಲ್ ಮಾತನಾಡಿ, ಎಸ್.ಐ.ಓ ನಿಂದ ತರಬೇತಿಗೊಂಡ ವಿದ್ಯಾರ್ಥಿಗಳು ಸಮಾಜಕ್ಕೆ ಮಾರ್ಗದರ್ಶಕರಾಗಬೇಕು. ಎಸ್.ಐ.ಓ. ಸಮಾಜಕ್ಕಾಗಿ ಹಲವಾರು ಯುವಕರನ್ನು ತಯಾರಿಸಿದೆ. ಅವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ. ಅಂತಹ ಮಾರ್ಗದರ್ಶಕ ಕೇಂದ್ರವಾಗಿ ಈ ಕಛೇರಿಯು ಮೂಡಿ ಬರಲಿ ಎಂದು ಹಾರೈಸಿದರು.

ಜೆ.ಐ.ಹೆಚ್.ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಮ್.ಯು. ಸಮಾರೋಪ ನುಡಿಗಳನ್ನಾಡುತ್ತ, ಸಂಘಟನೆಯ ಧ್ಯೇಯದೊಂದಿಗೆ ಮುನ್ನುಗ್ಗಿ ಯುವಕರು ಕಾರ್ಯಪ್ರವೃತ್ತರಾಗಬೇಕು ಎಂದು ಕರೆಯಿತ್ತರು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಜೆ.ಐ.ಹೆಚ್. ಪಾಣೆಮಂಗಳೂರು ಶಾಖಾಧ್ಯಕ್ಷ ಮುಖ್ತಾರ್ ಅಹ್ಮದ್, ಎಸ್.ಐ.ಓ. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ದಾನಿಶ್ ಚೆಂಡಾಡಿ ಮತ್ತು ಸಮಾಜ ಸೇವಕ ಶರೀಫ್ ಸಾದ್ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಸಫ್ವಾನ್ ಬೋಳಂಗಡಿ ಕಿರಾಅತ್ ಪಠಿಸಿದರು. ಎಸ್.ಐ.ಓ. ಪಾಣೆಮಂಗಳೂರು ಘಟಕಾಧ್ಯಕ್ಷ ಮುತಹ್ಹರ್ ಬೋಳಂಗಡಿ ಧನ್ಯವಾದವಿತ್ತರು. ಸಲ್ವಾನ್ ಬೋಳಂಗಡಿ ಕಾರ್ಯಕ್ರಮವನ್ನು ನಿರೂಪಿಸಿದರು.