ಮುಸ್ಲಿಮರ ವಿರುದ್ಧ ಬಹಿಷ್ಕಾರಕ್ಕೆ ಕರೆ ನೀಡಿದ್ದ ಸ್ವಾಮಿ ಆನಂದ್ ಸ್ವರೂಪ್: ತನಿಖೆ ನಡೆಸುತ್ತಿದ್ದೇವೆ ಎಂದ ಯುಪಿ ಪೊಲೀಸರು

0
380

ಸನ್ಮಾರ್ಗ ವಾರ್ತೆ

ಮೀರತ್: ಮೀರತ್‌ನ ಚೌಧರಿ ಚರಣ್‌ಸಿಂಗ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಂಕರಾಚಾರ್ಯ ಪರಿಷತ್ ನಾಯಕ ಸ್ವಾಮಿ ಆನಂದ್ ಸ್ವರೂಪ್‌ರವರು ಮುಸ್ಲಿಮರ ವಿರುದ್ಧ ಮಾಡಿದ್ದ ಅವಹೇಳನಕಾರಿ ಮತ್ತು ಪ್ರಚೋದನಾತ್ಮಕ ಹೇಳಿಕೆಗಳ ಬಗ್ಗೆ ಉತ್ತರ ಪ್ರದೇಶ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮೀರತ್ ಪೊಲೀಸರು ಈ ಕುರಿತು ಸೈಬರ್ ಸೆಲ್‌ನಿಂದ ತನಿಖೆ ನಡೆಸಲಾಗುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಬೆಂಗಳೂರು ಮೂಲದ ಸ್ವರೂಪ್ ಬುಧವಾರ ಬೆಳಿಗ್ಗೆ ಟ್ವಿಟ್ಟರ್‌‌ನಲ್ಲಿ ಪ್ರತಿಕ್ರಿಯಿಸಿದ್ದು, “ಸಾವಿಗೂ ಮತ್ತು ಕ್ರಮಕ್ಕೆ ಹೆದರುವುದಿಲ್ಲ” ಎಂದು ಬರೆದುಕೊಂಡಿದ್ದು, ಅವರ ಟ್ವೀಟ್‌ನಲ್ಲಿ ವಿವಾದಾತ್ಮಕ ಭಾಷಣದ ಸುದ್ದಿ ವರದಿಯ ಸ್ಕ್ರೀನ್‌ಶಾಟ್ ಕೂಡ ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೊವೊಂದರಲ್ಲಿ, ಸ್ವಾಮಿ ಆನಂದ್ ಸ್ವರೂಪ್ ಮುಸ್ಲಿಮರ ವಿರುದ್ಧ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರ’ಕ್ಕೆ ಕರೆ ನೀಡಿರುವುದನ್ನು ಕೇಳಬಹುದು.

ಆ ವಿಡಿಯೋಗಳನ್ನು ಆಸಿಫ್ ಖಾನ್ ಎಂಬವರು ಅಪ್‌ಲೋಡ್ ಮಾಡಿದ್ದಾರೆ. ಸ್ವರೂಪ್ ಅವರ ವೀಡಿಯೊವನ್ನು ಹಂಚಿಕೊಂಡು ಖಾನ್ ಟ್ವೀಟ್ ಮಾಡಿದ್ದು, ಮೀರತ್‌ನ ಸಿಸಿಎಸ್ ವಿಶ್ವವಿದ್ಯಾಲಯದಲ್ಲಿ ಈ ಹೇಳಿಕೆ ನೀಡಿದ್ದು, ಸ್ವಾಮಿ ಆನಂದ್ ಸ್ವರೂಪ್‌ರವರು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಬಹಿರಂಗವಾಗಿ ಗುರಿಯಾಗಿಸಿದ್ದಾರೆ. “ಕುರ್‌ಆನ್ ಓದುವವನು ಪ್ರಾಣಿಯಾಗುತ್ತಾನೆ” ಎಂದು ಅವರು ಹೇಳುತ್ತಾರೆ, ಅವರು ಮುಸ್ಲಿಮರನ್ನು ಆರ್ಥಿಕ ಬಹಿಷ್ಕಾರವನ್ನೂ ಹಾಕಿದ್ದಾರೆ‌. “ಹಿಂದೂ ರಿಪಬ್ಲಿಕ್ ಆಫ್ ಹಿಂದೂಸ್ತಾನ್” ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ.”

ಖಾನ್ ಮತ್ತೊಂದು ವೀಡಿಯೊವನ್ನೂ ಕೂಡ ಹಂಚಿಕೊಂಡಿದ್ದು, ಇದರಲ್ಲಿ ಸ್ವರೂಪ್‌ರವರು, ಖಡ್ಗವನ್ನು ಹಿಡಿದ ಒಂದು ಕೋಟಿ ಹಿಂದೂಗಳನ್ನು ಸಜ್ಜುಗೊಳಿಸುತ್ತಿದ್ದಾರೆ. “ನಮಗೆ ಒಂದು ಕೋಟಿ ಹಿಂದೂ ಯುವಕರ ಸೈನ್ಯ ಬೇಕು. ನಮಗೆ ಸ್ವಯಂ ಸೇವಕರು ಅಗತ್ಯವಿಲ್ಲ, ನಮಗೆ ಈಗ ಸ್ವಯಂ-ಸೇನಾ ಬೇಕು. ಖಡ್ಗಗಳು, ಬಂದೂಕುಗಳು ಅಥವಾ ನಿಮ್ಮ ಬಳಿ ಏನೇ ಇರಲಿ, ಯುದ್ಧವನ್ನು ಘೋಷಿಸಲಾಗಿದೆ ಮತ್ತು ನಾವು ಹಿಂದೂ ರಾಷ್ಟ್ರವನ್ನು ಹೊಂದುವವರೆಗೆ ಅದು ಮುಂದುವರಿಯುತ್ತದೆ “ಎಂದು ಅವರು ಹೇಳಿದರು.