ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ನ್ಯಾಶನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಎಂಫೋರ್ಸ್ಮೆಂಟ್ ಡೈರಕ್ಟರೇಟ್ (ಇಡಿ) ಮಂಗಳವಾರ ಪುನಃ ವಿಚಾರಣೆ ನಡೆಸಲಿದೆ. ಗುರುವಾರ ಸೋನಿಯರನ್ನು ಇಡಿ ಎರಡು ಗಂಟೆ ವಿಚಾರಣೆ ಮಾಡಿತ್ತು. ಕಳೆದ ವಿಚಾರಣೆಯಲ್ಲಿ 28 ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದರು.
ಇದೇ ವೇಳೆ, ಇಡಿ ವರ್ತನೆಯನ್ನು ಕಾಂಗ್ರೆಸ್ ಪ್ರತಿಭಟಿಸುವ ಸಲುವಾಗಿ ದೇಶಾದ್ಯಂತ ಇಂದು ಮೌನ ಪ್ರತಿಭಟನೆ ನಡೆಸಲಿದೆ. ರಾಜ್ಘಾಟನ್ನಲ್ಲಿ ಸತ್ಯಾಗ್ರಹಕ್ಕೆ ಅಧಿಕಾರಿಗಳು ಒಪ್ಪಿಗೆ ನೀಡಿಲ್ಲ. ಆದುದರಿಂದ ಪ್ರತಿಭಟನೆಯನ್ನು ಎಐಸಿಸಿ ಕಚೇರಿಗೆ ವರ್ಗಾಯಿಸಲಾಗಿದೆ. ಸಂಸದರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯಕಾರಿಣಿ ಸದಸ್ಯರು ಭಾಗವಹಿಸಲಿರುವರು.
ಇಡಿ ಬೇಟೆಯನ್ನು ವಿರೋಧಿಸಿ ಪ್ರತಿಪಕ್ಷಗಳನ್ನು ಸೇರಿಸಿಕೊಂಡು ಪಾರ್ಲಿಮೆಂಟ್ನ ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ.












