ರಾಜ್ಯಗಳಿಗೆ ಸಲ್ಲಬೇಕಾದ ಜಿಎಸ್‍ಟಿ ಪಾಲನ್ನು ಕೇಂದ್ರ ಸರಕಾರ ನೀಡುವುದಿಲ್ಲ- ಬಿಹಾರ ಬಿಜೆಪಿ ನಾಯಕ ಸುಶೀಲ್ ಮೋದಿ

0
612

ಸನ್ಮಾರ್ಗ‌ ವಾರ್ತೆ

ಹೊಸದಿಲ್ಲಿ: ಜಿಎಸ್ಟಿಯ ರಾಜ್ಯಗಳ ಪಾಲನ್ನು ರಾಜ್ಯಗಳಿಗೆ ನೀಡುವುದಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ಬಿಜೆಪಿ ನಾಯಕ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಹೇಳಿದ್ದಾರೆ. ಅವರು ಬಿಹಾರದ ವಿತ್ತ ಸಚಿವರೂ ಆಗಿದ್ದಾರೆ. ಇದರಿಂದ ರಾಜ್ಯ ಸರಕಾರಗಳ ಸ್ಥಿತಿ ಗಂಭೀರವಾಗಿದ್ದು ಇದನ್ನು ಸರಿಪಡಿಸಲು ಸೆಸ್ ಹೆಚ್ಚಿಸುವುದನ್ನು ಪರಿಗಣಿಸಬೇಕಾಗುತ್ತಿದೆ ಎಂದು ಅವರು ಹೇಳಿದರು.

ಜಿಎಸ್‍ಟಿ ಪಾಲು ಸಿಗುವುದು ತಡವಾಗುತ್ತಿರುವುದರಿಂದ ಹೆಚ್ಚಿನ ಸೆಸ್ ಉತ್ಪನ್ನಗಳಿಗೆ ಹೇರಬೇಕಾಗುತ್ತದೆ. ಅದಕ್ಕೆ ಕೇಂದ್ರ ಸರಕಾರ ಅನುಮತಿ ನೀಡಬೇಕಿದೆ. ಅಲ್ಲದಿದ್ದರೆ ಜಿಎಸ್ಟಿಯಲ್ಲಿರುವ ರಾಜ್ಯಗಳ ಪಾಲು ಕೊಡಬೇಕು. ಪಾನ್‍ ಮಸಾಲ, ಹೈಡ್ರೇಟೆಡ್ ಡ್ರಿಂಕ್, ಸಿಗರೇಟ್, ಕಲ್ಲಿದ್ದಲು, ಏರ್‍‌ಕ್ರ್ಯಾಪ್ಟ್, ಆಟೊ ಮೊಬೈಲ್, ಸಹಿತ 28 ತೆರಿಗೆ ಸ್ಲಾಬಿನಲ್ಲಿ ಏಳು ಉತ್ಪನ್ನಗಳಿಗೆ ಸೆಸ್ ಹೇರಲಾಗುತ್ತಿದೆ. ಶೇ.18 ಸ್ಲಾಬಿನಲ್ಲಿರುವ ಹಲವು ಉತ್ಪನ್ನಗಳನ್ನು ಶೇ.28ಕ್ಕೆ ಪರಿವರ್ತಿಸಿ ಸೆಸ್ ಹೇರಬೇಕಾಗಿದೆ ಎಂಬ ಬೇಡಿಕೆ ಕೇಳಿ ಬರುತ್ತಿದೆ.