ಕುವೈಟ್‌ನಲ್ಲಿ ಕಾರುಗಳದ್ದೇ ದರ್ಬಾರು: ಪ್ರತಿ ನಿವಾಸಿಗಳಲ್ಲಿ ಮೂರು, ಅನಿವಾಸಿಗರಲ್ಲಿ ಒಂದು ಕಾರು!

0
401

ಸನ್ಮಾರ್ಗ ವಾರ್ತೆ

ಕುವೈಟ್ ಸಿಟಿ: ಕುವೈಟ್‌‌ನ ಪ್ರತಿ ಕುಟುಂಬವು ಸರಾಸರಿ ಮೂರು ಕಾರುಗಳನ್ನು ಹೊಂದಿರುವುದಾಗಿ ವರದಿಯಾಗಿದೆ. ಬಹುಪಾಲು ವಲಸಿಗ ಕುಟುಂಬಗಳು ಕೂಡ ಒಂದೊಂದು ಕಾರು ಹೊಂದಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಪ್ರತಿ 100 ಕುವೈಟ್ ಕುಟುಂಬಗಳಿಗೆ 288 ಕಾರುಗಳಿವೆ ಎಂದು ಸಾರಿಗೆ ವಿಧಾನಗಳ ಅಧಿಕೃತ ಅಂಕಿಅಂಶಗಳು ಹೇಳಿವೆ. ಏತನ್ಮಧ್ಯೆ, ಪ್ರತಿ 100 ವಲಸಿಗ ಕುಟುಂಬಗಳು 98 ಕಾರುಗಳನ್ನು ಹೊಂದಿವೆ. ಪ್ರತಿ 100 ವಲಸಿಗ ಕುಟುಂಬಗಳು 22 ಮೋಟಾರ್‌ಸೈಕಲ್‌ಗಳನ್ನು ಹೊಂದಿದ್ದರೆ, ಪ್ರತಿ 100 ಸ್ಥಳೀಯ ಕುಟುಂಬಗಳು ಸುಮಾರು ಆರು ಮೋಟಾರ್‌ಸೈಕಲ್‌ಗಳನ್ನು ಹೊಂದಿವೆ.

ಅಲ್ಲದೇ, ಪ್ರತಿ 100 ಕುವೈಟ್‌ನ ಕುಟುಂಬಗಳು ಎಟಿವಿಗಳು, ಟ್ರೇಲರ್‌ಗಳು ಮತ್ತು ಕಾರವಾನ್‌ಗಳು ಸೇರಿದಂತೆ ಐದಕ್ಕೂ ಹೆಚ್ಚು ಸಾರಿಗೆ ವಿಧಾನಗಳನ್ನು ಹೊಂದಿವೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಜಾಗತಿಕವಾಗಿಯೇ ಕುವೈಟ್ ಅತಿ ಶ್ರೀಮಂತ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದು, ಜನರ ಬದುಕು ಕೂಡ ಅತಿ ಶ್ರೀಮಂತವಾಗಿರುವುದನ್ನು ಈ ಅಂಕಿ ಅಂಶಗಳು ಬೆಟ್ಟು ಮಾಡಿವೆ.