ಹಾಲಿಗೆ ಸಕ್ಕರೆಯ ಬದಲು ಇಂಗು ಹಾಕಿ ಕುಡಿದರೆ ಆಗುವ ಪ್ರಯೋಜನಗಳೇನು ಗೊತ್ತಾ…?

0
595

ಸನ್ಮಾರ್ಗ ವಾರ್ತೆ

ರಾತ್ರಿ ಮಲಗುವ ಮುಂಚೆ ಹಾಲಿಗೆ ಸಕ್ಕರೆ ಹಾಕಿ ಕುಡಿಯುವ ಬದಲು ಇನ್ನು ಮುಂದೆ ಸ್ವಲ್ಪ ಇಂಗು ಹಾಕಿ ಕುಡಿಯುವ ಅಭ್ಯಾಸ ಮಾಡಿದರೆ ಅದರಿಂದ ತುಂಬಾ ಪ್ರಯೋಜನವಿದೆ ಎಂದು ವೈದ್ಯ ವಿಜ್ಞಾನ ಹೇಳುತ್ತೆ. ನಿಮಗೆ ಗೊತ್ತಿರುವಂತೆ ಸಾಕಷ್ಟು ಜನರು ಜೀರ್ಣಾಂಗ ವ್ಯವಸ್ಥೆಯ ತೊಂದರೆಗಳಿಂದ ಮತ್ತು ಕರುಳು ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಉದಾಹರಣೆಗಳಿವೆ. ಇದರಲ್ಲಿ ಇರಿಟೇಬಲ್ ಬೋವೆಲ್ ಸಿಂಡ್ರೋಮ್ ಸಮಸ್ಯೆ ಕೂಡ ಒಂದು.

ಈ ತೊಂದರೆಯನ್ನು ಹೊಂದಿರುವ ಜನರು ಅಧಿಕ ರಕ್ತದ ಒತ್ತಡದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇಂಥವರಿಗೆ ಕೊಲೆಸ್ಟ್ರಾಲ್ ಮತ್ತು ಲಿಪಿಡ್ಸ್ ತೊಂದರೆ ಇರುತ್ತದೆ. ಅಂಥವರಿಗೆ ಇಂಗು ಪರಿಹಾರವಾಗಿದೆ. ಕೊಲೆಸ್ಟ್ರಾಲ್ ಮತ್ತು ಕೊಬ್ಬಿನ ಅಂಶ ನಮ್ಮ ರಕ್ತವನ್ನು ಮೊದಲಿಗಿಂತ ಗಟ್ಟಿ ಮಾಡುತ್ತದೆ. ಹೀಗೆ ಮಾಡಿದಾಗ ಸರಾಗವಾಗಿ ನಮ್ಮ ಹೃದಯದ ಮೂಲಕ ರಕ್ತ ಸಂಚಾರವಾಗಲು ಸಾಧ್ಯವಿರುವುದಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ದೇಹಕ್ಕೆ ಯಾವುದಾದರೂ ಒಂದು ರೂಪದಲ್ಲಿ ಇಂಗು ಸೇರಿದರೆ ಅದರಿಂದ ನಮ್ಮ ರಕ್ತ ಶುದ್ಧವಾಗುತ್ತದೆ ಮತ್ತು ತೆಳ್ಳಗೆ ಮೊದಲಿನಂತೆ ಆಗುತ್ತದೆ.

ಹಾಗೆಯೇ ಜೀರ್ಣಾಂಗ ವ್ಯವಸ್ಥೆಯ ತೊಂದರೆ ಇರುವವರು, ಆಗಾಗ ಗ್ಯಾಸ್ಟ್ರಿಕ್ ಎಂದು ಹೇಳುವವರು ಹಾಲಿಗೆ ಸ್ವಲ್ಪ ಇಂಗು ಹಾಕಿ ಕುಡಿಯಬೇಕು ಎಂದು ವೈದ್ಯರು ಹೇಳುತ್ತಾರೆ. ಇದರಿಂದ ಆಮಶಂಕೆ, ಮಲಬದ್ಧತೆಯ ಸಮಸ್ಯೆ, ಹೊಟ್ಟೆ ಕೆಟ್ಟು ಹೋಗಿರುವುದು, ಹೊಟ್ಟೆಯಲ್ಲಿ ಉರಿ ಮುಂತಾದ ಸಮಸ್ಯೆಗಳಿಗೂ ಪರಿಹಾರವಿದೆ ಎಂಬುದಾಗಿ ವರದಿಯಾಗಿದೆ.