ಕಳೆದ 24 ಗಂಟೆಗಳಲ್ಲಿ 96,760 ಸೋಂಕಿತರು: ದೇಶದಲ್ಲಿ 45.62 ಲಕ್ಷ ಕೋವಿಡ್ ಪ್ರಕರಣಗಳು

0
464

ಸನ್ಮಾರ್ಗ ವಾರ್ತೆ

ನವದೆಹಲಿ,ಸೆ.11:ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೊಸ ದಾಖಲೆಗಳನ್ನು ಮಾಡುತ್ತಿದೆ. ಕಳೆದ 24 ಗಂಟೆಗಳಲ್ಲಿ 96,760 ಸೋಂಕಿತರು ಹೆಚ್ಚಿದ್ದಾರೆ. ಇದರೊಂದಿಗೆ ರೋಗಿಗಳ ಸಂಖ್ಯೆ 45.62 ಲಕ್ಷಕ್ಕೆ ಏರಿಕೆಯಾಗಿದೆ. ಹೆಚ್ಚು ಕೊರೋನ ಪೀಡಿತ ದೇಶವಾದ ಅಮೆರಿಕಕ್ಕೆ ಹೋಲಿಸಿದರೆ, ಕಳೆದ ಐದು ದಿನಗಳಲ್ಲಿ ಭಾರತದಲ್ಲಿ ರೋಗಿಗಳ ಸಂಖ್ಯೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಗುರುವಾರ, ಅಮೆರಿಕದಲ್ಲಿ ಕೇವಲ 38,811 ಪ್ರಕರಣಗಳು ವರದಿಯಾಗಿದ್ದು, 1090 ಜನರು ಸಾವನ್ನಪ್ಪಿದ್ದಾರೆ.

ಮತ್ತೊಂದೆಡೆ, ದೇಶದಲ್ಲಿ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದು ಕಳೆದ ಎಂಟು ದಿನಗಳಲ್ಲಿ 1.70% ರಿಂದ 1.67% ಕ್ಕೆ ಇಳಿದಿದೆ. ಆದರೆ ಹೆಚ್ಚುತ್ತಿರುವ ಸಾವಿನ ಪ್ರಮಾಣ ಪಂಜಾಬ್, ಛತ್ತೀಸ್ಗಡ, ತಮಿಳುನಾಡು, ಉತ್ತರಾಖಂಡ್, ಕೇರಳ ಮತ್ತು ಅಸ್ಸಾಂ‌ನಲ್ಲಿ ಹೆಚ್ಚುತ್ತಿರುವುದು ಕಳವಳವನ್ನುಂಟು ಮಾಡಿದೆ. ಮತ್ತೊಂದೆಡೆ, ಗುಜರಾತ್, ಮಹಾರಾಷ್ಟ್ರ, ದೆಹಲಿ, ಕರ್ನಾಟಕ, ಉತ್ತರ ಪ್ರದೇಶ, ತೆಲಂಗಾಣಗಳಲ್ಲಿ ಕೊರೋನ ಸಾವುಗಳ ಪ್ರಮಾಣವು ಕಡಿಮೆಯಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.