ಸನ್ಮಾರ್ಗ ವಾರ್ತೆ
ತಾನು ಸುಜೂದ್ ಅಥವಾ ಸಾಷ್ಟಾಂಗ ಮಾಡುವುದಕ್ಕೆ ಯಾರದಾದರೂ ಅನುಮತಿಯನ್ನು ಪಡೆಯಬೇಕೇ? ನನಗೆ ಸಾಷ್ಟಾಂಗ ನಡೆಸಬೇಕು ಎಂದು ಅನಿಸಿದರೆ ಖಂಡಿತವಾಗಿಯೂ ಸಾಷ್ಟಾಂಗ ಮಾಡುತ್ತೇನೆ. ನಾನು ಓರ್ವ ಹೆಮ್ಮೆಯ ಮುಸ್ಲಿಂ ಮತ್ತು ಭಾರತೀಯ ಎಂದು ಭಾರತೀಯ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಶಮಿ ಹೇಳಿದ್ದಾರೆ.ವಿಶ್ವ ಕಪ್ ಕ್ರಿಕೆಟ್ ಪಂದ್ಯದ ವೇಳೆ ಶ್ರೀಲಂಕಾ ತಂಡದ ವಿರುದ್ಧ ಐದು ವಿಕೆಟ್ ಪಡೆದ ಬಳಿಕ ಅವರು ಸುಜೂದ್ ಮಾಡಲು ಬಯಸಿದರೂ ಆ ಬಳಿಕ ಮಾಡಲಿಲ್ಲ ಎಂಬ ವಿಷಯಕ್ಕೆ ಸಂಬಂಧಿಸಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಐದು ವಿಕೆಟ್ ಪಡೆದ ಬಳಿಕ ಶಮಿ ಸುಜೂದ್ ಮಾಡಲು ಬಯಸಿದ್ದ, ಆದರೆ ಭಾರತದ ರಾಜಕೀಯ ವಾತಾವರಣವನ್ನು ಮನಗoಡು ಅದರಿಂದ ಹಿಂಜರಿದರು ಎಂದು ಮಾಧ್ಯಮಗಳು ವರದಿ ಮಾಡಿದ್ದುವು. ಮಾತ್ರ ಅಲ್ಲ ಭಾರತದಲ್ಲಿ ಓರ್ವ ಮುಸ್ಲಿಮನಿಗೆ ಸುಜೂದು ಹಾಕಲು ಕೂಡ ಅವಕಾಶ ಇಲ್ಲ ಎಂದು ಪಾಕಿಸ್ತಾನದ ಮಂದಿ ಟ್ವೀಟ್ ಮಾಡಿದ್ದರು.
ಸುಜೂದ್ ಮಾಡಲು ಯಾರಾದರೂ ಬಯಸುವುದಾದರೆ ಸುಜೂದ್ ಮಾಡಬಹುದು. ಯಾರು ತಡೆಯುತ್ತಾರೆ? ನಾನು ನಿಮ್ಮನ್ನು ನಿಮ್ಮ ಧರ್ಮದಿಂದ ತಡೆಯುತ್ತಿಲ್ಲ, ಹಾಗೆಯೇ ನನ್ನನ್ನು ಕೂಡ ಯಾರೂ ತಡೆಯಲಾಗದು ಸುಜೂದ್ ಮಾಡುವುದರಲ್ಲಿ ಏನು ತೊಂದರೆ ಇದೆ? ಅದಕ್ಕೆ ಯಾರದಾದರೂ ಪರ್ಮಿಷನ್ ಬೇಕೆ? ನಾನು ಈ ಮೊದಲೂ 5 ವಿಕೆಟ್ ಪಡೆದಿದ್ದೇನೆ. ಆಗಲೂ ಸುಜೂದ್ ಮಾಡಿಲ್ಲ. ಸುಜೂದ್ ಮಾಡಬೇಕೆಂದರೆ ಹೇಳಿ,ಎಲ್ಲಿ ಮಾಡಬೇಕು? ಭಾರತದಲ್ಲಿ ಎಲ್ಲೂ ಕೂಡ ಸುಜೂದ್ ಮಾಡಬಹುದು. ಈ ಸೋಶಿಯಲ್ ಮೀಡಿಯಾದ ಮಂದಿಗೆ ನಮ್ಮನ್ನು ತೊಂದರೆಗೆ ಸಿಲುಕಿಸುವುದಲ್ಲದೆ ಬೇರೆ ಉದ್ದೇಶ ಇಲ್ಲ ಎಂದು ಅಜ್ ತಕ್ ಚಾನೆಲ್ ನೊಂದಿಗೆ ಮಾತಾಡುತ್ತಾ ಶಮಿ ಖಾರವಾಗಿ ಹೇಳಿದ್ದಾರೆ












