ಸನ್ಮಾರ್ಗ ವಾರ್ತೆ
ಚೆನ್ನೈ: ದೇಶದಲ್ಲಿ ವ್ಯಾಪಿಸಿರುವ ಎರಡನೇ ಕೋವಿಡ್ ಅಲೆಯ ಮಧ್ಯೆ ಎಂ ಕೆ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರಕಾರವು ಮೇ 30 ರವರೆಗೆ ಲಾಕ್ಡೌನ್ ಅನ್ನು ವಿಸ್ತರಿಸಿದೆ. ಆ ಮೂಲಕ ಮತ್ತೆ ಒಂದು ವಾರಗಳ ಕಾಲ ಲಾಕ್ಡೌನ್ ಹೆಚ್ಚಿಸಿದೆ. ಹಿಂದಿನ ಲಾಕ್ಡೌನ್ ಮೇ 24 ರಂದು ಕೊನೆಗೊಳ್ಳಬೇಕಿತ್ತು.
ತಮಿಳು ನಾಡಿನಲ್ಲಿ ಶುಕ್ರವಾರ ಕೋವಿಡ್ ನಿಂದ 467 ಮಂದಿ ಸಾವನ್ನಪ್ಪಿರುವ ವರದಿಯಾಗಿದ್ದು, ಕಳೆದ 24 ಗಂಟೆಗಳಲ್ಲಿ ಇದು 36,184 ಹೊಸ ಪ್ರಕರಣಗಳನ್ನು ದಾಖಲಿಸಿದೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.
ಹೊಸ ಮಾರ್ಗಸೂಚಿಗಳ ಪ್ರಕಾರ, ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ನಾಳೆ ರಾತ್ರಿ 9 ರವರೆಗೆ ಅಂಗಡಿಗಳು ತೆರೆದಿರುತ್ತವೆ. ಸ್ಥಳೀಯ ಸಂಸ್ಥೆಗಳ ನೆಟ್ವರ್ಕ್ ಮೂಲಕ ರಾಜ್ಯಾದ್ಯಂತ ತರಕಾರಿಗಳು ಮತ್ತು ಹಣ್ಣುಗಳನ್ನು ಪೂರೈಸಲು ಸಹಾಯ ಮಾಡುವುದಾಗಿ ತಮಿಳುನಾಡು ಸರ್ಕಾರ ತಿಳಿಸಿದೆ. ಹಾಗೂ ಎಲ್ಲಾ ಮಾಲ್ಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಬ್ಯಾಂಕುಗಳು, ಖಾಸಗಿ ಹಾಗೂ ಸರಕಾರಿ ಕಚೇರಿಗಳು ವರ್ಕ್ ಫ್ರಮ್ ಹೋಂ ಮೂಲಕ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದೆ.
ನಿನ್ನೆ ನೆರೆಯ ರಾಜ್ಯವಾದ ಕೇರಳ ಕೂಡ ಮೇ 30 ರವರೆಗೆ ಲಾಕ್ ಡೌನ್ ವಿಸ್ತರಿದರೆ, ಕರ್ನಾಟಕವು ಜೂನ್ 7 ರವರೆಗೆ ಲಾಕ್ ಡೌನ್ ವಿಸ್ತರಿಸಿತ್ತು.












