ರೈಲು ಪಟ್ಟಿಯಲ್ಲಿ ಮೊಟಾರು ಸೈಕಲ್ ಸವಾರಿ : ಕೇಸು ಜಡಿದ ರೈಲ್ವೆ

0
786

ಸನ್ಮಾರ್ಗ ವಾರ್ತೆ

ಕೇರಳ, ಜು. 30: ಕಂಟಯನರ್ ಝೋನ್‍ನಿಂದ ಹೊರಗೆ ಹೋಗಲು ರೈಲ್ವೆ ಟ್ರಾಕ್ ಮೂಲಕ ಸಾಹಸಿಕ ಬೈಕ್ ಚಲಾಯಿಸಿದ ಯುವಕರ ವಿರುದ್ಧ ಕೇಸು ದಾಖಲಾಗಿದೆ. ಯುವಕರು ರೈಲುಪಟ್ಟಿಯಲ್ಲಿ ಬೈಕ್‍ನಲ್ಲಿ ಹೋಗುತ್ತಿರುವುದು ಗೊತ್ತಾಗಿ ರೈಲ್ವೆ ಪೊಲೀಸರು ಅಲ್ಲಿಗೆ ಹೋದಾಗ ಬೈಕ್ ಬಿಟ್ಟು ಓಡಿದ್ದಾರೆ. ವವಾಕ್ಕಾವಲಿನಿಂದ ಕರುನಾಗಪ್ಪಳ್ಳಿಗೆ ಅವರು ಹೊರಟಿದ್ದರು.

ಘಟನೆ ಅರಿತು ಕಾಯಂಕುಳಂನಲ್ಲಿ ಭದ್ರತಾ ಅಧಿಕಾರಿಗಳು ಕಾದು ಕುಳಿತಿದ್ದರು. ಪೊಲೀಸರನ್ನು ನೋಡಿದೊಡನೆ ಯುವಕರು ಬೈಕನ್ನು ಬಿಟ್ಟೇ ಓಡಿ ಹೋಗಿದ್ದಾರೆ. ಬೈಕ್ ದೀಪು ಎಂಬಾತನ ಮಾಲಕತ್ವದ್ದಾಗಿದೆ. ಬೈಕ್‍ನಲ್ಲಿ ಹೋದವರ ಬಗ್ಗೆ ತನಿಖೆ ಮುಂದುವರಿದಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.