ಸನ್ಮಾರ್ಗ ವಾರ್ತೆ
ಚೆನ್ನೈ,ಆ.: ಸ್ಮಾರ್ಟ್ ಫೋನ್ ಇಲ್ಲದ್ದರಿಂದ ಆನ್‍ಲೈನ್ ಕ್ಲಾಸಿನಲ್ಲಿ ಭಾಗವಹಿಸಲಾಗದ ಬೇಸರದಲ್ಲಿ ತಮಿಳ್ನಾಡಿನಲ್ಲಿ ಹತ್ತನೆ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಮಿಳ್ನಾಡಿನ ಗುಡಲ್ಲೂರ್ ಜಿಲ್ಲೆಯಲ್ಲಿ ಬುಧವಾರ ರಾತ್ರೆ ಘಟನೆ ನಡೆದಿದೆ.
ಕೊರೊನದಿಂದ ಲಾಕ್ ಡೌನ್ ಘೋಷಣೆಯಾದ ಬಳಿಕ ಆನ್ ಲೈನ್ ತರಗತಿ ಆರಂಭವಾಗಿತ್ತು. ವಳ್ಳಲಾರ್ ಹೈಸ್ಕೂಲಿನ ಹದಿನಾಲ್ಕು ವರ್ಷದ ಬಾಲಕನಿಗೆ ಸ್ಮಾರ್ಟ್ ಫೋನ್ ಇಲ್ಲದ್ದರಿಂದ ತರಗತಿಯಲ್ಲಿ ಭಾಗವಹಿಸಲು ಆಗುತ್ತಿರಲಿಲ್ಲ. ಗೇರು ಕೃಷಿಕನಾದ ತಂದೆಯೊಂದಿಗೆ ಸ್ಮಾರ್ಟ್‍ಫೋನ್ ಖರೀದಿಸಿ ಕೊಡುವಂತೆ ಹೇಳಿದ್ದ. ಗೇರು ಮಾರಾಟವಾದ ಮೇಲೆ ಸ್ಮಾರ್ಟ್ ಫೋನ್ ಖರೀದಿಸಿ ಕೊಡುವೆ ಎಂದು ತಂದೆ ಹೇಳಿದ್ದ. ಇದಕ್ಕೆ ಆತ ಕೋಪಗೊಂಡಿದ್ದ ಎಂದು ತಂದೆ ವಿಜಯಕುಮಾರ್ ಹೇಳಿದರು. ಬಾಲಕನ ಸಾವನ್ನು ಗುಡಲ್ಲೂರ್ ಪೊಲೀಸರು ಅಸಹಜ ಸಾವು ಎಂದು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.
ತಮಿಳ್ನಾಡಿನ ಖಾಸಗಿ ಶಾಲೆಗಳು ಅನ್‍ಲೈನ್ ತರಗತಿ ಆರಂಭಿಸಿವೆ. ಇದು ಬಡ ಮಕ್ಕಳಿಗೆ ಪ್ರತಿಕೂಲವಾಗಿ ಬಾಧಿಸುವುದು ಮತ್ತು ಡಿಜಿಟಲ್ ಭೇದವನ್ನು ಸೃಷ್ಟಿಸುವುದೆಂದು ಎಐಎಡಿಎಂಕೆ ಹೇಳಿತ್ತು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












