ಯುಪಿ: ಏಕಕಾಲದಲ್ಲಿ 25 ಜಿಲ್ಲೆಗಳಲ್ಲಿ ಪಾಠ ಮಾಡಿ ಒಂದು ಕೋಟಿ ರೂ. ವೇತನ ಪಡೆದ ಶಿಕ್ಷಕಿ ಪೊಲೀಸರ ವಶಕ್ಕೆ!

0
635

ಕಸ್ಗಂಜ್: ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯ(ಕೆಜಿಬಿವಿ) ಸೇರಿದಂತೆ 25 ಜಿಲ್ಲೆಗಳ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿ 13 ತಿಂಗಳ ಅವಧಿಯಲ್ಲಿ 1 ಕೋಟಿ ರೂ. ಸಂಬಳ ಪಡೆದ ಶಿಕ್ಷಕ ಅನಾಮಿಕಾ ಶುಕ್ಲಾರನ್ನು ಉತ್ತರ ಪ್ರದೇಶದ ಕಸ್ಗಂಜ್ ಜಿಲ್ಲೆಯಲ್ಲಿ ಕಳೆದ ವಾರ ಪೊಲೀಸರು ಬಂಧಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಕಸ್ಗಂಜ್ ಮೂಲ ಶಿಕ್ಷಣ ಅಧಿಕಾರಿ ಅಂಜಲಿ ಅಗರ್ವಾಲ್, “ಅನಾಮಿಕಾ ಶನಿವಾರ ಮಧ್ಯಾಹ್ನ ನಮ್ಮ ಕಚೇರಿಗೆ ಸ್ನೇಹಿತನ ಮೂಲಕ ರಾಜೀನಾಮೆ ಪತ್ರವನ್ನು ಕೊಟ್ಟು ಕಳುಹಿಸಿದ್ದರು. ಕೂಡಲೇ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿ, ಪೊಲೀಸರನ್ನು ತಕ್ಷಣ ಕರೆಸಿಕೊಂಡು ವಂಚನೆ ಮಾಡಿದ ಶಿಕ್ಷಕಿಯನ್ನು ಒಂದು ಕಾರಿನಲ್ಲಿ ಕಚೇರಿಯ ಹತ್ತಿರವೇ ಸಿಬ್ಬಂದಿ ಸದಸ್ಯರ ಸಹಾಯದಿಂದ ಬಂಧಿಸಲಾಗಿದೆ‌” ಎಂದರು.

ಪೊಲೀಸರು ಕೂಡಲೇ ಆಕೆಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದಿದ್ದು, ಆಕೆಯ ವಿಚಾರಣೆ ನಡೆಸುತ್ತಿದ್ದಾರೆ.

ಮೂಲಭೂತ ಶಿಕ್ಷಣ ಇಲಾಖೆ, ಶಿಕ್ಷಕರ ಡಿಜಿಟಲ್ ಡೇಟಾಬೇಸ್ ರಚಿಸಲು ಪ್ರಾರಂಭಿಸಿದ ನಂತರ ಭಾಗಪತ್ ಜಿಲ್ಲೆಯ ಕೆಜಿಬಿವಿಯಲ್ಲಿ ಪೂರ್ಣ ಸಮಯದ ವಿಜ್ಞಾನ ಶಿಕ್ಷಕಿಯಾದ ಅನಾಮಿಕಾ, 25 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಕೆಲಸ ಮಾಡುತ್ತಿರುವುದು ಕಂಡು ಬಂದಿತ್ತು.

ಈ ವಿಷಯ ಬೆಳಕಿಗೆ ಬಂದ ನಂತರ ಯುಪಿ ಮೂಲ ಶಿಕ್ಷಣ ಸಚಿವ ಡಾ.ಸತೀಶ್ ದ್ವಿವೇದಿಯವರು ಅನಾಮಿಕಾ ಶುಕ್ಲಾ ವಿರುದ್ಧ ತನಿಖೆ ಮತ್ತು ಎಫ್ಐಆರ್‌ಗೆ ಆದೇಶಿಸಿದ್ದರು. ರಾಜ್ಯಾದ್ಯಂತ 746 ಕೆಜಿಬಿವಿಗಳಲ್ಲಿ ಪೋಸ್ಟ್ ಮಾಡಲಾದ ಎಲ್ಲಾ ಶಿಕ್ಷಕರ ವೈಯಕ್ತಿಕ ಪರಿಶೀಲನೆ ನಡೆಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಂಚನೆಯಲ್ಲಿ ಯಾವುದೇ ವಿಭಾಗದ ಅಧಿಕಾರಿಗಳು ಅನಾಮಿಕಾ ಶುಕ್ಲಾರವರಿಗೆ ಸಹಾಯ ಮಾಡಿದ್ದಾರೆಂದಾದರೇ ಅವರ ಮೇಲೆಯೂ ಎಫ್‌ಐಆರ್ ದಾಖಲಿಸಲಾಗುವುದು ಎಂದು ಸಚಿವರು ಇಂಡಿಯಾ ಟುಡೆಗೆ ತಿಳಿಸಿದ್ದಾರೆ.

ಶಿಕ್ಷಕರ ಹಾಜರಾತಿ ಮತ್ತು ಪರಿಶೀಲನೆಯ ಸಂಪೂರ್ಣ ಪ್ರಕ್ರಿಯೆಯನ್ನು ನಾವು ಪಾರದರ್ಶಕತೆಗಾಗಿ ಡಿಜಿಟಲ್ ಮಾಡುತ್ತಿದ್ದೇವೆ. ಹಾಜರಾತಿಗಾಗಿ ಪ್ರತಿ ಶಾಲೆಗೆ ಟ್ಯಾಬ್ಲೆಟ್ ಒದಗಿಸಲಾಗುತ್ತಿದೆ ಆದರೆ ಲಾಕ್‌ಡೌನ್ ಕಾರಣ ವಿತರಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಟ್ಯಾಬ್ಲೆಟ್ ವಿತರಣೆಯ ಪ್ರಕ್ರಿಯೆಯನ್ನು ನಾವು ಶೀಘ್ರದಲ್ಲೇ ಪೂರ್ಣಗೊಳಿಸುತ್ತೇವೆ” ಎಂದು ಡಾ.ಸತೀಶ್ ದ್ವಿವೇದಿ ಹೇಳಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.