ಬಾಂಬ್ ಇಟ್ಟಿದ್ದು ಟಿಫಿನ್ ಬಾಕ್ಸ್ ನಲ್ಲಿ ಅಲ್ಲ, ಪ್ಲಾಸ್ಟಿಕ್ ಕವರ್ ನಲ್ಲಿ; ಇದನ್ನು ಕುಟುಂಬದ ಮನೆಯ ಟೆರೇಸ್ ನಲ್ಲಿ ತಯಾರಿಸಿದ್ದೇನೆ: ಡೊಮಿನಿಕ್ ಮಾರ್ಟಿನ್

0
674

ಸನ್ಮಾರ್ಗ ವಾರ್ತೆ

ಕೊಚ್ಚಿ, ಅ. 30: ಕಳಮಶ್ಶೇರಿ ಸ್ಫೋಟ ಪ್ರಕರಣದ ಆರೋಪಿ ಡೊಮನಿಕ್ ಮಾರ್ಟಿನ್ ಪೊಲೀಸರಿಗೆ ತಾನು ಹೇಗೆ ಬಾಂಬ್ ತಯಾರಿಸಿದೆ, ಎಲ್ಲಿ ತಯಾರಿಸಿದೆ ಎಂದು ತಿಳಿಸಿದ್ದಾನೆ. ಬಾಂಬನ್ನು ಟಿಫಿನ್ ಬಾಕ್ಸಿನಲ್ಲಿರಿಸಿದ್ದಲ್ಲ, 6 ಪ್ಲಾಸ್ಟಿಕ್ ಕವರ್ ಗಳಲ್ಲಿ ಬಾಂಬು ಇರಿಸಿದೆ ಎಂದು ಆರೋಪಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

ಯುಟ್ಯೂಬ್ ನೋಡಿ ಬಾಂಬು ಮಾಡಲು ಕಲಿತೆ. ಭಾರೀ ಸ್ಫೋಟ ಶಕ್ತಿ ಹೊಂದಿರುವ ಪಟಾಕಿ ಖರೀದಿಸಿ, ಪೆಟ್ರೋಲ್ ಉಪಯೋಗಿಸಿ ಆಲುವದ ತಮ್ಮ ಕುಟುಂಬದ ಮನೆಯ ಟೆರೆಸಿನಲ್ಲಿ ಬಾಂಬು ತಯಾರಿಸಿ ಕಳಮಶೇರಿಗೆ ಕೊಂಡು ಹೋಗಿ ಸ್ಫೋಟಿಸಿದ್ದೇನೆ ಎಂದು ಹೇಳಿದ್ದಾನೆ.

ಬೆಳಗ್ಗೆ ಏಳು ಗಂಟೆಗೆ ಸಭಾ ಭವನಕ್ಕೆ ಬಂದು ಮುಂದಿನ ಆರು ಕಡೆಯಲ್ಲಿ ಈತ ಬಾಂಬು ಇರಿಸಿದ್ದು, ಹಿಂದಿನ ಸೀಟಲ್ಲಿ ಕುಳಿತು ಆರೋಪಿ ಸ್ಫೋಟದ ದೃಶ್ಯವನ್ನು ಮೊಬೈಲ್ ಫೋನ್‍ನಲ್ಲಿ ಚಿತ್ರೀಕರಿಸಿದ್ದಾನೆ. ಸ್ಫೋಟಕ್ಕೆ 50 ಗುಂಡು ಬಳಸಿದ್ದಾಗಿ ಆರೋಪಿ ಹೇಳಿಕೊಂಡಿದ್ದಾನೆ. 8 ಲೀಟರ್ ಪೆಟ್ರೋಲನ್ನು ಸ್ಫೋಟಕ್ಕೆ ಬಳಸಿದ್ದು, ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ರಿಮೋಟ್ ಅಳವಡಿಸಿದ್ದಾನೆ.

ಇದೇ ವೇಳೆ ಕಳಮಶ್ಶೇರಿ ಸ್ಫೋಟದಲ್ಲಿ ಒಟ್ಟು ಮೂರು ಮಂದಿ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಹನ್ನೆರಡು ವರ್ಷದ ಬಾಲಕಿ ಸೋಮವಾರ ಮೃತಪಟ್ಟಿದ್ದಾಳೆ. ಸಭಾ ಗ್ರಹದಲ್ಲಿ ಎರಡು ಸಾವಿರ ಮಂದಿ ಭಾಗವಹಿಸಿದ್ದರು. ಆದಿತ್ಯವಾರ ಈ ಸ್ಫೋಟ ನಡೆದಿತ್ತು. ಗಂಟೆಗಳ ಕಾಲ ನಿಗೂಢ ಹುಡಕಾಟ ನಂತರ ನಾನೇ ಬಾಂಬು ಸ್ಫೋಟಿಸಿದ್ದೆಂದು ಡೊಮನಿಕ್ ಮಾರ್ಟಿನ್ ಹೇಳಿಕೆ ನೀಡಿ ತೃಶೂರು ಕೊಡಕರ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದಾನೆ. ಈತನೇ ಆರೋಪಿ ಈತ ಎರ್ನಾಕುಳ ತಮ್ಮನಂ ಎಂಬಲ್ಲಿನ ನಿವಾಸಿ ಎಂದು ಪೊಲೀಸರು ತನಿಖೆಯ ನಂತರ ದೃಢಪಡಿಸಿದ್ದಾರೆ.

ಘಟನೆಯಲ್ಲಿ 61 ಮಂದಿ ಗಾಯಗೊಂಡಿದ್ದು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಲಬೀನಾ(12) ಲಿಯೊಣ ಪೌಲೋಸ್(55), ಇಡುಕ್ಕಿ ಕುಮಾರಿ (53) ಮೃತಪಟ್ಟಿದ್ದಾರೆ. ಲಿಯೊಣ ಸ್ಫೋಟ ನಡೆದ ಸ್ಥಳದಲ್ಲಿಯೇ ಮೃತಪಟ್ಟಿದ್ದರು.