ಕುವೈಟಿನ ಮಾನವೀಯ ಕೆಲಸಗಳನ್ನು ಹೊಗಳಿದ ವಿಶ್ವಸಂಸ್ಥೆಯ ಪ್ರತಿನಿಧಿ

0
261

ಸನ್ಮಾರ್ಗ ವಾರ್ತೆ

ಕುವೈಟ್ ಸಿಟಿ: ಕುವೈಟ್ ಫೆಲಸ್ತೀನಿಗೆ ನೀಡುತ್ತಿರುವ ಮಾನವೀಯ ಸಹಾಯಕ್ಕೆ ಮತ್ತು ಘರ್ಷಣೆ ನಿಲ್ಲಿಸಲು ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಕುವೈಟಿನ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಪ್ರತಿನಿಧಿ ಘಾದ ಅಲ್ ತಹರ್ ಪ್ರಶಂಸಿದರು.

ಮಾನವೀಯ ವಿಭಾಗದಲ್ಲಿ, ದಿವಂಗತ ಅಮೀರ್ ಶೇಖ್ ಸಬಾಹ್ ಅಲ್ ಅಹ್ಮದ್ ಅಲ್ಲ ಜಾಬಿರ್ ಅಸ್ಸಬಾಹರ ದಾರಿಯಲ್ಲಿದ್ದೀರಿ ಎಂದು ಅಮೀರ್ ಶೇಖ್ ಅಲ್ ಅಹ್ಮದ್ ಅಲ್ ಜಾಬಿರ್ ಅಸ್ಸಬಾಹ್ ಮತ್ತು ರಾಜಕುಮಾರ ಶೇಖ್ ಮಿಶ್‍ಅಲ್ ಅಲ್ ಅಹ್ಮದ್ ಜಾಬಿರ್ ಅಸ್ಸಬಾಹ್‍ರಿಗೆ ಅವರು ಹೇಳಿದರು.

ಜಗತ್ತಿನ ಉದ್ದಕ್ಕೂ ಇರುವ ಜನರ ಕಷ್ಟವನ್ನು ಕಡಿಮೆ ಗೊಳಿಸಲು ವಿಶೇಷವಾಗಿ ಆಸ್ಪತ್ರೆ ಶಾಲೆಗಳಿಗೆ ಮೂಲ ಸೌಕರ್ಯದ ಅಭಿವೃದ್ಧಿಗೆ ಸಹಾಯ ಮಾಡುವುದರಲ್ಲಿ ಕುವೈಟ್ ಎಲ್ಲ ಕಾಲದಲ್ಲಿ ಮುಂಚೂಣಿಯಲ್ಲಿರುತ್ತದೆ. ಕುವೈಟ್ ಅದರ ವಿಷನ್- 2035 ಗುರಿಯನ್ನು ಸಾಧಿಸುವುದಕ್ಕೆ ಪೂರ್ಣವಾಗಿ ಪ್ರತಿಜ್ಞಾ ಬದ್ಧವಾಗಿದೆ. ವಿಶ್ವಸಂಸ್ಥೆ ಕಮ್ಯುನಿಟಿಯ ಸಕ್ರಿಯ ಸದಸ್ಯರೂ ಆಗಿದೆ ಕುವೈಟ್ ಎಂದು ಅವರು ಹೇಳಿದರು.

ಮಧ್ಯಪ್ರಾಚ್ಯದಲ್ಲಿ ಮತ್ತು ಇಡೀ ಜಗತ್ತಿನಲ್ಲಿ ಘರ್ಷಣೆ ನಿಲ್ಲಿಸುವ ಚರ್ಚೆಗಳಲ್ಲಿ ಮಧ್ಯವರ್ತಿಯಾಗಿ ಕುವೈಟ್ ಇದೆ. ಸಮಸ್ಯೆ ಘರ್ಷಣೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಲು ಹಿರಿದಾದ ಪಾತ್ರವನ್ನು ಕುವೈಟ್ ವಹಿಸಿದೆ. ಸಿರಿಯ,ಯಮನ್ ವಿಷಯಗಳಲ್ಲಿಯೂ ಗಲ್ಫ್ ಬಿಕ್ಕಟ್ಟನ್ನು ಕೊನೆಗೊಳಿಸುವಲ್ಲಿಯೂ ಕುವೈಟ್ ನಡೆಸಿದ ಪ್ರಯತ್ನಗಳನ್ನು ಘಾದ ಅಲ್ ತಹರ್ ನೆನಪಿಸಿದರು.