ಸನ್ಮಾರ್ಗ ವಾರ್ತೆ
ಗಾಝಾದಲ್ಲಿ ಸಾಮಾನ್ಯ ನಾಗರಿಕರ ಹತ್ಯೆಯಾಗುವುದನ್ನು ತಡೆಯುವುದಕ್ಕೆ ಇಸ್ರೇಲ್ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. 25,000 ಕ್ಕಿಂತಲೂ ಅಧಿಕ ಮಂದಿ ಗಾಝಾದಲ್ಲಿ ಹತ್ಯೆಗೀಡಾಗಿದ್ದಾರೆ. ಯುದ್ಧ ಮುಂದುವರಿದಂತೆ ಉಗ್ರವಾದವೂ ಬೆಳೆಯುತ್ತದೆ. ಪಶ್ಚಿಮಕ್ಕೆ ಈಗಾಗಲೇ ಯುದ್ಧ ವ್ಯಾಪಿಸಿದೆ. ಹೂತಿಯಂಥ ಉಗ್ರ ಸಂಘಟನೆಗಳಿಗೆ ಜನಬೆಂಬಲ ಲಭ್ಯವಾಗತೊಡಗಿದೆ. ಈ ಯುದ್ಧವನ್ನು ಕೊನೆಗೊಳಿಸಬೇಕಾಗಿದೆ.. ದ್ವಿರಾಷ್ಟ್ರ ಸಿದ್ದಾಂತಕ್ಕೆ ನೇತನ್ಯಾಹೂ ಒಪ್ಪಿಕೊಳ್ಳಲೇಬೇಕು ಎಂದು ಫಿನ್ ಲಾಂಡ್ ನ ವಿದೇಶ ಸಚಿವೆ ಎಲಿನ ವಾಲ್ಟನ್ ಆಗ್ರಹಿಸಿದ್ದಾರೆ.
ಇಸ್ರೇಲ್ ನ ಸ್ವರಕ್ಷಣೆಯ ಅವಧಿ ಮುಗಿದಿದೆ. ಎಲ್ಲವನ್ನೂ ನಿಲ್ಲಿಸಬೇಕಾಗಿದೆ. ಶಾಂತಿಯನ್ನು ಮರು ಸ್ಥಾಪಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಇಸ್ರೇಲ್ ನಲ್ಲಿ ಶೀಘ್ರವೇ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಫೆಲಸ್ತೀನಿಗಳಂತೆ ಇಸ್ರೇಲಿಯರು ಕೂಡ ಶಾಂತಿ ಬಯಸುತ್ತಿದ್ದಾರೆ. ಆದರೆ ಈಗಿನ ಇಸ್ರೇಲಿ ಸರಕಾರಕ್ಕೆ ಈ ಬಗ್ಗೆ ಯಾವ ದೂರ ದೃಷ್ಟಿಯೂ ಇಲ್ಲ. ನೆತನ್ಯಾಹು ದ್ವಿರಾಷ್ಟ್ರ ಸಿದ್ಧಾಂತಕ್ಕೆ ಇನ್ನೂ ಬದ್ಧತೆ ವ್ಯಕ್ತಪಡಿಸಿಲ್ಲ ಎಂದವರು ಹೇಳಿದ್ದಾರೆ
ಗಾಝಾದಲ್ಲಿ ಜನರು ಹಸಿವಿನಿಂದ ಇದ್ದಾರೆ. ಕುಡಿಯಲು ಶುದ್ಧ ನೀರಿಲ್ಲ. ಇದಕ್ಕೆ ಇಸ್ರೇಲ್ ಕಾರಣ. ವಿದೇಶದಿಂದ ಬರುವ ಪರಿಹಾರ ಸಾಮಗ್ರಿಗಳು ಗಾಝಾ ತಲುಪದಂತೆ ಇಸ್ರೇಲ್ ತಡೆಯೊಡ್ದುತ್ತಿದೆ. ಇದನ್ನು ತಡೆಯಬೇಕಿದೆ ಎಂದು ಅವರು ಹೇಳಿದ್ದಾರೆ.












