ಸರಕಾರದ ಹಟದಿಂದ ಭಾರತದ ಜಾಗತಿಕ ವರ್ಚಸ್ಸಿಗೆ ಧಕ್ಕೆ; ಕ್ರಿಕೆಟ್ ತಾರೆಯರ ಟ್ವೀಟ್‍ನಿಂದ ಪರಿಹಾರ ಆಗುವುದಿಲ್ಲ- ಸಂಸದ ಶಶಿ ತರೂರ್

0
476

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಫೆ.4: ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುವ ರೈತರನ್ನು ಬೆಂಬಲಿಸಿ ಟ್ವೀಟ್ ಮಾಡಿದ ಪಾಪ್ ಗಾಯಕಿ ರಿಹಾನ್ನ ವಿರುದ್ಧ ಕ್ರಿಕೆಟ್ ತಾರೆಯರು ಮುಂತಾದವರು ರಂಗಪ್ರವೇಶಿಸಿದ್ದು ಅಚ್ಚರಿಯಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದರು.

ಕೇಂದ್ರ ಸರಕಾರದ ಹಟದಿಂದ, ಪ್ರಜಾಪ್ರಭುತ್ವ ವಿರೋಧೀ ಸ್ವಭಾವದಿಂದ ಜಾಗತಿಕ ವರ್ಚಸ್ಸಿಗೆ ಧಕ್ಕೆಯಾಗಿದೆ. ಅದು ಕ್ರಿಕೆಟ್ ತಾರೆಯರಿಂದ ಪರಿಹಾರವಾಗುವುದಿಲ್ಲ ಎಂದು ಶಶಿ ತರೂರು ಅಭಿಪ್ರಾಯ ವ್ಯಕ್ತಪಡಿಸಿದ್ದು, ತನ್ನ ಟ್ವಿಟರ್ ಹ್ಯಾಂಡಲ್‍ನಲ್ಲಿ ತರೂರ್ ಹೀಗೆ ಬರೆದಿದ್ದಾರೆ.

“ಪಾಶ್ಚಾತ್ಯ ಸೆಲಬ್ರಿಟಿಗಳ ವಿರುದ್ಧ ಪ್ರತಿಕ್ರಿಯಿಸಲು ಕೇಂದ್ರ ಸರಕಾರಕ್ಕೆ ಭಾರತದ ಸೆಲಬ್ರಿಟಿಗಳು ಸಿಕ್ಕಿದ್ದು ಅಚ್ಚರಿ ತಂದಿದೆ. ಕೇಂದ್ರ ಸರಕಾರದ ಹಟ, ಪ್ರಜಾಪ್ರಭುತ್ವ ವಿರೋಧಿ ಸ್ವಭಾವದ ಕಾರಣ ಆಗಿರುವ ಜಾಗತಿಕ ವರ್ಚಸ್ಸಿನ ಧಕ್ಕೆಗೆ ಕ್ರಿಕೆಟ್ ತಾರೆಯರ ಟ್ವೀಟ್ ಪರಿಹಾರವಾಗುವುದಿಲ್ಲ. ಕೃಷಿ ಕಾನೂನು ಹಿಂಪಡೆದು ಪರಿಹಾರಕ್ಕಾಗಿ ಚರ್ಚೆ ಮಾಡಿರಿ. ಭಾರತವನ್ನು ನಿಮಗೆ ಒಗ್ಗೂಡಿಸಬಹುದು”

ಪಾಪ್ ಗಾಯಕಿ ರಿಹಾನ್ನ ವಿರುದ್ಧ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರವಿಶಾಸ್ತ್ರಿ, ಅನಿಲ್ ಕುಂಬ್ಳೆ, ಸುರೇಶ್ ರೈನಾ, ಮುಂತಾದವರು ಟ್ವೀಟ್ ಮಾಡಿದ್ದಾರೆ. ಇಂಡಿಯಾ ಒಗ್ಗಟ್ಟಿನಲ್ಲಿದೆ. ಭಾರತ ಪ್ರೊಪಂಗಂಡದ ವಿರುದ್ಧ ಎಂಬ ಹ್ಯಾಶ್ ಟ್ಯಾಗ್ ಹಾಕಿ ತಾರೆಯರು ಟ್ವೀಟ್ ಮಾಡಿದ್ದಾರೆ.