ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ್ನು ಅಪಹಾಸ್ಯಗೈದ ಸಿಂಧಿಯಾ; ಸಿಂಧಿಯಾರನ್ನು ಆಶೀರ್ವದಿಸಿದ ದಿಗ್ವಿಜಯ್ ಸಿಂಗ್

0
393

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಫೆ.4: ಮಧ್ಯಪ್ರದೇಶ ಕಾಂಗ್ರೆಸ್‍ನಲ್ಲಿ ಒಟ್ಟಿಗೆ ಇದ್ದು ಒಟ್ಟಾಗಿ ಕಾರ್ಯವೆಸಗಿದ್ದ ಒಂದೇ ಊರಿನ ಇಬ್ಬರು ನೇತಾರರು ರಾಜ್ಯಸಭೆಯಲ್ಲಿ ಪರಸ್ಪರ ಎದುರಾಗಿ ನಿಂತಾಗ ಸದನದಲ್ಲಿ ನಗು ತುಂಬಿಕೊಂಡಿತು.

ಗುರುವಾರ ರಾಜ್ಯಸಭೆಯಲ್ಲಿ ಬಿಜೆಪಿಯ ಜ್ಯೋತಿರಾದಿತ್ಯ ಸಿಂಧಿಯ ಕಾಂಗ್ರೆಸನ್ನು ಕಟು ಭಾಷೆಯಲ್ಲಿ ಆಕ್ಷೇಪಿಸಿದರು. ಅದಾದನಂತರ ಎದ್ದು ನಿಂತ ದಿಗ್ವಿಜಯ್ ಸಿಂಗ್, ಸಿಂಧಿಯಾರಿಗೆ ಆಶೀರ್ವದಿಸಿ ಮಾತಾಡಿದರು. ಯಾವ ಪಾರ್ಟಿಯಲ್ಲಿಆ ಶ್ರಯ ಪಡೆದರೂ ಸಿಂಧಿಯರಿಗೆ ತಾನು ಆಶೀರ್ವದಿಸುತ್ತೇನೆ ಎಂದು ದಿಗ್ವಿಜಯ್ ಸಿಂಗ್ ಹೇಳಿದರು.

ಮೊದಲು ಮಾತಾಡಿದ ಸಿಂಧಿಯ ಕೋವಿಡ್ ಮಹಾಮಾರಿಯ ವಿರುದ್ಧ ದೇಶದ ಕಾರ್ಯಕ್ರಮಗಳನ್ನು ಅಭಿನಂದಿಸಿದರು. ದೇಶವ್ಯಾಪಿ ಲಾಕ್‍ಡೌನ್ ಸುರಕ್ಷೆಯಾಯಿತು ಎಂದು ಹೇಳಿದರು. ಕೊನೆಯಲ್ಲಿ ಕೃಷಿ ಕಾನೂನನ್ನು ಅವರು ಬೆಂಬಲಿಸಿ ಮಾತಾಡಿದರು.

ಸಿಂಧಿಯಾ ಭಾಷಣದ ನಂತರ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯಿಡು ದಿಗ್ವಿಜಯ್ ಸಿಂಗ್‍ರಿಗೆ ಅವಕಾಶ ನೀಡಿದರು. ಯಾವತ್ತೂ ಒಟ್ಟಾಗಿಲ್ಲದ ಒಂದೇ ಊರಿನವರನ್ನು ಒಬ್ಬರ ನಂತರ ಒಬ್ಬರಂತೆ ಕರೆದಾಗ ಸದನ ನಗೆಗಡಲಾಯಿತು. ಈ ನಗು ಇನ್ನಷ್ಟು ಜೋರಾಗುವಂತೆ ಅವರು ಭಾಷಣ ಮಾಡಿದರು.