ಸನ್ಮಾರ್ಗ ವಾರ್ತೆ
ತಿರುವನಂತಪುರಂ: ಕೇರಳದ ಕೆ-ರೈಲ್ವೆ ಯೋಜನಾ ಸರ್ವೆ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು ದೊಡ್ಡ ಮಟ್ಟದ ಪ್ರತಿಭಟನೆಯಿಂದಾಗಿ ಇಂದು ಸಮೀಕ್ಷೆ ನಡೆಸುವುದಿಲ್ಲ ಎಂದು ಸೂಚನೆಗಳು ಲಭಿಸಿದೆ. ಪ್ರತಿಭಟನಕಾರರನ್ನು ಎದುರಿಸಲು ಸರ್ವೆ ನಡೆಸುವ ಏಜೆನ್ಸಿಗಳು ರಂಗ ಪ್ರವೇಶಿಸಿದ್ದವು. ಪ್ರತಿಭಟನಾಕಾರರು ಅದರ ಉದ್ಯೋಗಿಗಳಿಗೆ ಹಲ್ಲೆ, ಸಮೀಕ್ಷೆಯ ಉಪಕರಣಗಳಿಗೆ ಹಾನಿ ಮಾಡಿದ್ದರಿಂದ ಸಮೀಕ್ಷೆ ನಿಲ್ಲಿಸಲಾಗಿದೆ ಎಂದು ಏಜೆನ್ಸಿ ತಿಳಿಸಿದೆ. ಇದೇ ವೇಳೆ ಇಡೀ ರಾಜ್ಯದಲ್ಲಿ ಈ ಸಮೀಕ್ಷೆ ಸ್ಥಗಿತವಾಗಿಲ್ಲ ಎಂದು ಕೆ-ರೈಲು ತಿಳಿಸಿದೆ.
ಮೊದಲು ತೀರ್ಮಾನಿಸಿದಂತೆ ಮಾರ್ಚ್ 31ರೊಳಗೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸುವುದಾಗಿತ್ತು. ಪ್ರಸ್ತುತ ಸನ್ನಿವೇಶದಲ್ಲಿ ಕೆರೈಲು ಯೋಜನೆಯನ್ನು ಹೇಗೆ ಮಾಡುವುದು ಎಂಬುದರ ಕುರಿತ ಮುಂದಿನ ತೀರ್ಮಾನವನ್ನು ಕಗೊಳ್ಳಬೇಕಿದೆ ಎಂದು ಅಧಿಕಾರಿಗಳು ಹೇಳಿದರು.
ಕೆರೈಲು ಸರ್ವೆ ವಿರುದ್ಧ ಕೇರಳದ ವಿವಿಧ ಕಡೆಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಎದ್ದಿದೆ. ಮಾಡಪ್ಪಳ್ಳಿಯಲ್ಲಿ ಪೊಲೀಸರಿಂದ ಲಾಠಿಚಾರ್ಜು ನಡೆದಿತ್ತು. ಇದೇ ವೇಳೆ ಸಂಯಮ ವಹಿಸಿ ಎಂದು ಪೊಲೀಸರಿಗೆ ಕೇರಳದ ಡಿಜಿಪಿ ಸೂಚಿಸಿದ್ದಾರೆ.












