ದಿ ಕೇರಳ ಸ್ಟೋರಿ: ವ್ಯಾಪಕ ಆಕ್ರೋಶದ ಬಳಿಕ ಕ್ಷಮೆಯಾಚಿಸಿದ ಬಾಗಲಕೋಟೆಯ ಕಾಲೇಜು

0
283

ಸನ್ಮಾರ್ಗ ವಾರ್ತೆ

ವಿವಾದಾತ್ಮಕ ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಿಸಲು ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಅರ್ಧ ದಿನ ರಜೆ ನೀಡಿರುವ ಘಟನೆ ಬಾಗಲಕೋಟೆಯ ಇಲಕಲ್‌ನಲ್ಲಿ ನಡೆದಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.

ಶ್ರೀ ವಿಜಯ ಮಹಾಂತೇಶ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮೇ 24 ಬುಧವಾರದಂದು ಮಧ್ಯಾಹ್ನ ತನ್ನ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಿಸಿ ದಿ ಕೇರಳ ಸ್ಟೋರಿ ವೀಕ್ಷಿಸಲು ಎಲ್ಲಾ ವಿದ್ಯಾರ್ಥಿಗಳಿಗೆ ಸೂಚಿಸಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತು ಕಾಲೇಜು ಆಡಳಿತ ಮಂಡಳಿಯ ಹೆಸರಿನಲ್ಲಿ ಇರುವ ಆದೇಶ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅದರಲ್ಲಿ ಬಿಎಂಎಸ್ ಮೊದಲ ವರ್ಷದಿಂದ ಅಂತಿಮ ವರ್ಷದ ಎಲ್ಲಾ ವಿದ್ಯಾರ್ಥಿಗಳ ಮೇ 24ರಂದು ಹನ್ನೊಂದು ಗಂಟೆಗೆ ಸ್ಥಳೀಯ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ನೋಡುವಂತೆ ತಿಳಿಸಲಾಗಿದೆ.

ಈ ಆದೇಶ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ವ್ಯಾಪಕ ಆಕ್ರೋಶದ ಬಳಿಕ ಕಾಲೇಜು ಪ್ರಾಚಾರ್ಯರು ಕ್ಷಮೆ ಯಾಚಿಸಿದ್ದಾರೆ.