ಪುನಃ ಅಡುಗೆ ಅನಿಲ ದರ ಏರಿಕೆ

0
603

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಫೆ.4: ಕಷ್ಟದ ಮೇಲೆ ಕಷ್ಟ ಎಂಬಂತೆ ಜನಸಾಮಾನ್ಯರಿಗೆ ತೈಲ ಏರಿಕೆ ಹಾಗೂ ಅಡುಗೆ ಅನಿಲ ದರ ಏರಿಕೆಯು ನುಂಗಲಾಗದ ತುತ್ತಾಗಿ ಪರಿಣಮಿಸುತ್ತಿದೆ. ಅಡುಗೆ ಅನಿಲ ದರವನ್ನು ಪುನಃ ಹೆಚ್ಚಿಸಲಾಗಿದ್ದು ಮನೆಗಳಿಗೆ ವಿತರಣೆ ಮಾಡುವ ಸಿಲಿಂಡರಿಗೆ 26 ರೂಪಾಯಿ ಏರಿಕೆ ಮಾಡಲಾಗಿದೆ. ಇದರೊಂದಿಗೆ ಸಿಲಿಂಡರ್‌ನ ಈಗಿನ ದರ 726ರೂಪಾಯಿ ಆಗಿದೆ.

ಬೆಲೆ ಹೆಚ್ಚಳ ಇಂದಿನಿಂದಲೇ ಜಾರಿಗೆ ಬಂದಿದ್ದು ಕಳೆದ ಮೂರು ತಿಂಗಳಲ್ಲಿ ಒಟ್ಟು 126 ರೂಪಾಯಿ ಅಡುಗೆ ಸಿಲಿಂಡರ್‌ಗೆ ಹೆಚ್ಚಳವಾಗಿದೆ. 2020 ಡಿಸೆಂಬರ್ 2ರಂದು 50ರೂಪಾಯಿ ಹೆಚ್ಚಳವಾಗಿತ್ತು. ಎರಡು ವಾರಗಳ ಬಳಿಕ ಡಿಸೆಂಬರ್ 15ಕ್ಕೆ ಪುನಃ 50 ರೂಪಾಯಿ ದರ ಏರಿಕೆಯಾಗಿತ್ತು. ಕೇಂದ್ರ ಸರಕಾರದ ಹೊಸ ಬಜೆಟ್‍ನ ನಂತರ ಮೊದಲ ದರ ಏರಿಕೆಯಿದು.