ಸನ್ಮಾರ್ಗ ವಾರ್ತೆ
ಫೆಲೆಸ್ತೀನ್ ರಾಷ್ಟ್ರವನ್ನು ಅಧಿಕೃತವಾಗಿ ಅಂಗೀಕರಿಸಲು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ಗಳು ತೀರ್ಮಾನಿಸಿರುವುದನ್ನು ಕುವೈತ್ ಸ್ವಾಗತಿಸಿದೆ. ಫೆಲೆಸ್ತೀನ್ ರಾಷ್ಟ್ರವನ್ನು ಅಧಿಕೃತವಾಗಿ ಅಂಗೀಕರಿಸುವ ಮೂಲಕ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿರ್ಣಯಗಳನ್ನು ಮತ್ತು ಅರಬ್ ಜಗತ್ತಿನ ಶಾಂತಿಯನ್ನು ಈ ಎರಡು ರಾಷ್ಟ್ರಗಳು ಬೆಂಬಲಿಸಿದಂತಾಗಿದೆ ಎಂದು ಕುವೈತ್ ಹೇಳಿದೆ.
1967ರ ಗಡಿರೇಖೆಯಂತೆ ಪಶ್ಚಿಮ ಜರುಸಲೇಮನ್ನು ರಾಜಧಾನಿಯಾಗಿಸಿ ಸ್ವತಂತ್ರ ರಾಷ್ಟ್ರ ನಿರ್ಮಿಸುವ ಫೆಲಸ್ತೀನಿಯರ ಬಯಕೆಗೆ ಈ ನಿರ್ಧಾರ ಬಲ ನೀಡಲಿದೆ. ಜಗತ್ತಿನ ಇತರ ರಾಷ್ಟ್ರಗಳೂ ಇಂಥದ್ದೇ ನಿಲುವು ತಳೆಯಬೇಕು ಎಂದು ಕುವೈಟ್ ಆಗ್ರಹಿಸಿದೆ.
ಮುಂದಿನ ತಿಂಗಳು ನಡೆಯುವ ವಿಶ್ವಸಂಸ್ಥೆಯ ಸಭೆಯಲ್ಲಿ ಕೆನಡಾ ಫ್ರಾನ್ಸ್ ಬ್ರಿಟನ್ ಮುಂತಾದ ರಾಷ್ಟ್ರಗಳು ಫೆಲೆಸ್ತೀನ್ ರಾಷ್ಟ್ರವನ್ನು ಅಧಿಕೃತವಾಗಿ ಅಂಗೀಕರಿಸುವುದಕ್ಕೆ ಸಿದ್ಧತೆಗಳು ನಡೆಸುತ್ತಿರುವುದರ ಬೆನ್ನಿಗೆ ಆಸ್ಟ್ರೇಲಿಯಾ ಈ ಘೋಷಣೆಯನ್ನು ಮಾಡಿದೆ.












