ಉತ್ತರಾಖಂಡ ಮದರಸ ಧ್ವಂಸಕ್ಕೆ ಕೋರ್ಟಿನ ಆದೇಶವಿರಲಿಲ್ಲ

0
251

ಸನ್ಮಾರ್ಗ ವಾರ್ತೆ

ಡೆಹ್ರಾಡೂನ್: ಉತ್ತರಾಖಂಡದ ಹಲ್ದ್ವಾನಿಯಲ್ಲಿರುವ ಮದರಸಾವನ್ನು ನ್ಯಾಯಾಲಯದ ಆದೇಶವಿಲ್ಲದೆ ನೆಲಸಮ ಮಾಡಲಾಗಿದೆ. ಸ್ಥಳೀಯ ನಿವಾಸಿಗಳು ನಮಾಜ್ ಮಾಡಲು ಬಳಸುತ್ತಿದ್ದ ಕಟ್ಟಡವನ್ನು ಧ್ವಂಸಗೊಳಿಸಿದ ನಂತರ ಉಂಟಾದ ಸಂಘರ್ಷದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನ್ಯಾಯಾಲಯದ ಆದೇಶದಂತೆ ಮದರಸಾವನ್ನು ಕೆಡವಲು ಅನುಮತಿ ನೀಡಲಾಗಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿಕೊಂಡಿದ್ದರು.

ನೈನಿತಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಇದನ್ನೆ ಹೇಳಿದ್ದರು. ಮಾಧ್ಯಮಗಳು ಕೂಡ ಇದನ್ನೇ ಪ್ರಚಾರಪಡಿಸಿದವು. ಆದರೆ ಜಸ್ಟಿಸ್ ಪಂಕಜ್ ಪುರೋಹಿತ್ ಹೊರಡಿಸಿದ ಆದೇಶದ ಪ್ರತಿಯಲ್ಲಿ ಅವರ ಪೀಠ ಫೆಬ್ರುವರಿ 14ಕ್ಕೆ ವಿಚಾರಣೆ ಮುಂದೂಡಿತ್ತು. ಆದರೆ ಮುಂದಿನ ವಿಚಾರಣೆಗೆ ಕಾಯದೆ ಮುನ್ಸಿಪಲ್ ಕಾರ್ಪೊರೇಷನ್ ಕಟ್ಟಡ ಕೆಡವಿದೆ. ಜನವರಿ 30ಕ್ಕೆ ಮಸೀದಿ ಮದ್ರಸಾ ಕೆಡಹುವ ನೋಟೀಸು ನೀಡಲಾಗಿತ್ತು ಎಂದು ಕಾರ್ಪೊರೇಷನ್ ಆಯುಕ್ತ ಪಂಕಜ್ ಉಪಾಧ್ಯಾಯ ಹೇಳಿದರು.

ಕೋರ್ಟು ಸ್ಟೇ ಕೊಟ್ಟಿದ್ದರೆ ಹೀಗಾಗುತ್ತಿರಲಿಲ್ಲ. ಅವರಿಗೆ ತಡೆಯಾಜ್ಞೆ ಸಿಕ್ಕಿರಲಿಲ್ಲ. ಆದರೆ ಸ್ಥಳದ ಮಾಲಕ ಮಾಲಿಕ್‍ರ ವಕೀಲರು ಅಹ್ರಾರ್ ಬೇಗ್ ಈ ವಾದವನ್ನು ತಳ್ಳಿಹಾಕಿದ್ದಾರೆ. ತಮಗೆ ನೋಟಿಸು ಕೊಟ್ಟಿಲ್ಲ ಕೇಸಿಗೆ ಹೋಗಲು ಸಮಯವನ್ನೂ ನೀಡದೆ ಮುನ್ಸಿಪಾಲಿಟಿ ಈ ಕೃತ್ಯವೆಸಗಿದೆ ಎಂದು ಬೇಗ್ ಹೇಳಿದರು.