ಸನ್ಮಾರ್ಗ ವಾರ್ತೆ
ಕ್ಯಾಲಿಫೋರ್ನಿಯಾ: ರೋಗ ಲಕ್ಷಣಗಳು ಪ್ರಕಟಗೊಳ್ಳುವ ಮೊದಲೇ 50 ರೀತಿಯ ಕ್ಯಾನ್ಸರ್ ಗಳನ್ನು ಪತ್ತೆ ಹಚ್ಚುವ ಗಲೇರಿ ರಕ್ತ ಪರೀಕ್ಷೆಯನ್ನು ವಿಜ್ಞಾನಿಗಳು ಕಂಡು ಹುಡುಕಿದ್ದಾರೆ.
ಕ್ಲಿನಿಕಲ್ ಚಿಹ್ನೆಗಳು ಲಕ್ಷಣಗಳೋ ತೋರಿಸುವ ಮೊದಲೇ ಮಲ್ಟಿ-ಕ್ಯಾನ್ಸರ್ ಸ್ಕ್ರೀನಿಂಗ್ ಟೆಸ್ಟ್ ಆಗಿ ಗಲೆರಿಯನ್ನು ಉಪಯೋಗಿಸಬಹುದು. ರೋಗ ಲಕ್ಷಣಗಳಿಲ್ಲದ 50 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯೋಮಾನದವರಿಗೆ ಈ ಪರೀಕ್ಷೆಯಿಂದ ಮೊದಲೇ ರೋಗವನ್ನು ಪತ್ತೆಹಚ್ಚಲು ಸಾಧ್ಯ ಎಂದು ವಿಜ್ಞಾನಿಗಳು ಸಂಶೋಧಿಸಿದ್ದಾರೆ.
ಈ ಪರೀಕ್ಷೆ ಮೂಲಕ ಪ್ರಾಣಾಪಾಯವನ್ನು ಕಡಿಮೆಗೊಳಿಸಬಹುದೆಂದು ವಿಜ್ಞಾನಿಗಳು ಹೇಳಿದ್ದು, ಅಮೆರಿಕದ ಕ್ಯಾಲಿಫೋರ್ನಿಯದ ಗ್ರೆಯ್ಲ್ ಕಂಪೆನಿ ಪರೀಕ್ಷಾ ಕಿಟ್ ನಿರ್ಮಿಸಿದ್ದು ವೈದ್ಯರ ಸೂಚನೆ ಮೇರೆಗೆ ಅಮೆರಿಕದಲ್ಲಿ ಪರೀಕ್ಷೆಯನ್ನು ಪ್ರಾರಂಭಿಸಲಾಗಿದೆ.
ಇದು ಸ್ತನ, ಸೆರ್‍ವಿಕಲ್ , ಮೂತ್ರಕೋಶ, ಶ್ವಾಸಕೋಶ, ಕರುಳು ಅರ್ಬುದಗಳಿಗೆ ಈಗಿರುವ ಸ್ಕ್ರೀನಿಂಗ್ ಕ್ರಮಗಳಿಗೆ ಪೂರಕವಾಗಿರುತ್ತದೆ. ಒಂದೇ ಸಲದ ಪರೀಕ್ಷೆಯಲ್ಲಿ 50 ರೀತಿಯ ಕ್ಯಾನ್ಸರ್ ರೋಗಗಳನ್ನು ಗಲೇರಿ ಕ್ಲಿನಿಕಲ್ ಪರೀಕ್ಷೆಯಿಂದ ದೃಢೀಕರಿಸಲಾಗಿತ್ತು.
ರಕ್ತ ಸ್ಯಾಂಪಲ್‍ಗಳ ಡಿಎನ್‍ಎ ಯಲ್ಲಿ ನಡೆಸುವ ಪರೀಕ್ಷೆಯ ಮೂಲಕ ರೋಗ ನಿರ್ಣಯಿಸಲಾಗುತ್ತದೆ. ಗ್ರೇಲ್ಸ್ ನ ಕ್ಲಿನಿಕಲ್ ಟ್ರಯಲ್ ಪರೀಕ್ಷೆಗಳಿಗೆ 1,34,00 ಮಂದಿ ಭಾಗವಹಿಸಿದ್ದರು. ಪರೀಕ್ಷೆಯಲ್ಲಿ ಕ್ಯಾನ್ಸರ್ ನ ಸ್ಥಳವನ್ನು ಬಹಿರಂಗಪಡಿಸಲಾಗಿತ್ತು.
ರಕ್ತ ಪರೀಕ್ಷೆಯ ಮೂಲಕ ಕ್ಯಾನ್ಸರ್ ನ ಒಂದು ಸಿಗ್ನಲ್ ಪತ್ತೆ ಮಾಡುವ ಜೊತೆಗೆ ಉನ್ನತ ಸ್ಪಷ್ಟತೆಯಲ್ಲಿ ದೇಹದಲ್ಲಿ ಎಲ್ಲಿ ಇದು ಇದೆ ಎಂದು ಕಂಡು ಹಿಡಿಯಲು ಕೂಡ ಸಾಧ್ಯವಿದೆ ಎಂದು ಚೀಫ್ ಮೆಡಿಕಲ್ ಆಫಿಸರ್ ಡಾ. ಜೇಶ್ವ ಆಫ್‍ಮೆನ್ ಹೇಳಿದ್ದಾರೆ.
ರೋಗ ನಿರ್ಣಯ ಉಪಚರಕ್ಕಾಗಿ ಮುಂದಿನ ಘಟ್ಟ ನಿರ್ಣಯಿಸಲು ಇದು ಆರೋಗ್ಯ ಕಾರ್ಯಕರ್ತರಿಗೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
ಅರ್ಬುದ ಮೊದಲೇ ಗುರುತಿಸುವ ಪರೀಕ್ಷೆ ವ್ಯವಸ್ಥೆ ಅಸ್ತಿತ್ವದಲ್ಲಿಲ್ಲ. ಕರುಳು, ಪಾನ್‍ಕ್ರಿಯಾಸ್, ಅನ್ನನಾಳ ಮೊದಲಾದ ಮಾರಕ ಅರ್ಬುದವನ್ನು ಮೊದಲೇ ಕಂಡು ಹುಡುಕಲು ಆಗುವುದಿಲ್ಲ. ಈ ಹೊಸ ಪರೀಕ್ಷಾ ಪದ್ಧತಿಯಿಂದ ಮೊದಲೇ ಅರ್ಬುದವನ್ನು ಪತ್ತೆ ಹಚ್ಚುವುದರಿಂದ ಬಹಳಷ್ಟು ಜೀವ ಉಳಿಸಲು ಸಾಧ್ಯವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












