ಗಡ್ಡ, ಟೋಪಿ ಇದ್ದದ್ದರಿಂದ ಅವನನ್ನು ಅವರು ಕೊಂದರು: ಪೊಲೀಸರ ಆರೋಪ ಅಲ್ಲಗಳೆದ ಖುರ್ಷಿದ್ ಅಹ್ಮದ್ ಕುಟುಂಬ

0
762

ಸನ್ಮಾರ್ಗ ವಾರ್ತೆ

ಲಕ್ನೋ: ಉತ್ತರ ಪ್ರದೇಶದಲ್ಲಿ ಮೂರು ದಿನಗಳ ಹಿಂದೆ ಕುರ್ಷಿದ್ ಅಹ್ಮದ್(50) ಕೊಲೆ ಘಟನೆಯಲ್ಲಿ ಗಡ್ಡ, ಟೋಪಿ ಧರಿಸಿದ್ದರಿಂದ ಖುರ್ಷಿದ್‍ರನ್ನು ಹೊಡೆದು ಕೊಂದಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಆದರೆ, ಜಗಳದಲ್ಲಿ ಕುರ್ಷಿದ್‍ರ ಹತ್ಯೆ ನಡೆದಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.

ಕಳೆದ ಬುಧವಾರ ಕೋಟಾದ ಕರಕುರ್ದು ಗ್ರಾಮದಲ್ಲಿ ಖುರ್ಷಿದ್ ಅಹ್ಮದ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಹೋದರನ ದೂರಿನಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಜನರ ಗುಂಪು ಹೊಡೆದು ಖುರ್ಸಿದ್ ರವರನ್ನು ಕೊಲೆ ಮಾಡಿದೆ ಎಂದು ಕುರ್ಷಿದ್‍ರ ಸಹೋದರ ಹೇಳಿದ್ದಾರೆ. ಗಡ್ಡ ಟೋಪಿ ಧರಿಸಿದ್ದರಿಂದ ಖುರ್ಷಿದ್‍ರನ್ನು ಕೊಲೆ ಮಾಡಲಾಗಿದೆ. ಆದರೆ ಪೊಲೀಸರು ಜಗಳದಿಂದ ಕೊಲೆ ನಡೆದಿದೆ ಎನ್ನುತ್ತಿದ್ದಾರೆ. ಆದರೆ ನನ್ನ ಅಣ್ಣ ಯಾರೊಂದಿಗೂ ಜಗಳಕ್ಕೆ ನಿಲ್ಲುವ ವ್ಯಕ್ತಿಯಲ್ಲ . ನೆರೆಯವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎಂದು ಅವರು ಹೇಳಿದರು.

ಘಟನೆಯಲ್ಲಿ ಸಿಸಿಟಿವಿ ದೃಶ್ಯಗಳು ಎರಡು ದಿವಸಗಳ ನಂತರ ಲಭ್ಯವಾಗಲಿದೆ ಎಂದು ಪೊಲೀಸರು ಹೇಳಿದ್ದರು. ಹಿಮಾಂಶು ಪಾಂಡೆಯ ನೇತೃತ್ವದಲ್ಲಿ ಖುರ್ಷಿದ್‍ರನ್ನು ಹೊಡೆದು ಕೊಲೆ ಮಾಡಲಾಗಿದೆ. ಹಿಮಾಂಶರನ್ನು ಪೊಲೀಸರು ಹುಡುಕುತ್ತಿದ್ದಾರೆ. ಖುರ್ಷಿದ್ ಮಾನಸಿಕವಾಗಿ ಅಸ್ವಸ್ಥ ವ್ಯಕ್ತಿಯಾಗಿದ್ದರು ಎಂದು ಕುಟುಂಬ ತಿಳಿಸಿದೆ.

ಮದುವೆಯಾಗಿರಲಿಲ್ಲ. ಕೆಲಸವೂ ಇರಲಿಲ್ಲ. ಆಸ್ಪತ್ರೆಗೆ ಹೋಗಿ ನವಜಾತ ಶಿಶುಗಳಿಗೆ ಪ್ರಾರ್ಥಿಸುತ್ತಿದ್ದರು. ಮಂಗಳವಾರ ಖುರ್ಷಿದ್ ಕಾಣೆಯಾಗಿದ್ದರು. ಬುಧವಾರ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದರು.