ಲಖೀಂಪುರ ರೈತರ ಮಾರಣಹೋಮ ಪ್ರಕರಣ: ನಿವೃತ್ತ ನ್ಯಾಯಾಧೀಶರಿಗೆ ಮೇಲ್ನೋಟದ ಹೊಣೆ ವಹಿಸಿದ ಸುಪ್ರೀಂ ಕೋರ್ಟ್

0
268

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಲಖೀಂಪುರ ಖೇರಿ ಸಾಮೂಹಿಕ ಕೊಲೆ ಪ್ರಕರಣದ ತನಿಖೆಯ ಮೇಲ್ನೋಟ ವಹಿಸಲು ಹೈ ಕೋರ್ಟಿನ ನಿವೃತ್ತ ನ್ಯಾಯಾಧೀಶರನ್ನು ಸುಪ್ರೀಂಕೋರ್ಟು ನೇಮಕಗೊಳಿಸಿ ಆದೇಶ ಹೊರಡಿಸಿದೆ. ಪಂಜಾಬ್- ಹರಿಯಾಣ ಹೈಕೋರ್ಟಿನ ಮಾಜಿ ಜಡ್ಜ್ ರಾಕೇಶ್ ಕುಮಾರ್ ಜೈನ್‍ರಿಗೆ ತನಿಖೆಯ ಮೇಲ್ನೋಟದ ಹೊಣೆ ಸುಪ್ರೀಂ ಕೋರ್ಟು ನೀಡಿದ್ದು ವಿಶೇಷ ತನಿಖಾ ತಂಡವನ್ನು ಪುನರ್‌ರಚಿಸಿತು.

ಚೀಫ್ ಜಸ್ಟಿಸ್ ಎನ್‌.ವಿ ರಮಣರ ಅಧ್ಯಕ್ಷತೆಯ ಪೀಠ ಆದೇಶ ಹೊರಡಿಸಿತು. ಎಸ್.‌ಬಿ ಶಿರೋಡ್ ಕುಮಾರ್, ದೀಪಿಂದರ್ ಸಿಂಗ್, ಪದ್ಮಜಾ ಚೌಹಾನ್ ಉತ್ತರಪ್ರದೇಶದ ಹೊರಗಿನ ಪಿಎಸ್ ಅಧಿಕಾರಿಗಳು ವಿಶೇಷ ತನಿಖಾ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.

ಕೇಂದ್ರ ಗೃಹ ಸಹ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಷ್ ಮಿಶ್ರ ಮುಖ್ಯ ಆರೋಪಿಯಾಗಿರುವ ಪ್ರಕರಣ ತನಿಖೆಯನ್ನು ಉತ್ತರಪ್ರದೇಶ ಪೊಲೀಸರ ವಿಶೇಷ ತಂಡಕ್ಕೆ ಒಪ್ಪಿಸಲಾಗಿತ್ತು. ಲಖೀಂಪುರ ಖೇರಿಯ ಎಎಸ್‍ಐ ರ್ಯಾಂಕಿಂಗ್ ಅಧಿಕಾರಿಗಳು ಹೆಚ್ಚು ಈ ತಂಡದಲ್ಲಿದ್ದಾರೆ.

ಪ್ರಕರಣದಲ್ಲಿ ಉತ್ತರಪ್ರದೇಶ ಸರಕಾರ ನಡೆಸಿದ ತನಿಖೆ ಪ್ರಗತಿಯಲ್ಲಿಲ್ಲದ ಕಾರಣದಿಂದ ನಿವೃತ್ತ ನ್ಯಾಯಾಧೀಶರನ್ನು ಮೇಲ್ನೋಟ ವಹಿಸಲು ಸುಪ್ರೀಂ ಕೋರ್ಟು ನೇಮಿಸಿತು. ತನಿಖಾ ತಂಡದಲ್ಲಿ ಐಪಿಎಸ್ ಅಧಿಕಾರಿಗಳನ್ನು ಸೇರ್ಪಡೆಗೊಳಿಸಲು ಸುಪ್ರೀಂ ಕೋರ್ಟು ತೀರ್ಮಾನಿಸಿತು.

ತನಿಖೆಯ ವಿಶ್ವಾಸಾರ್ಹತೆಯನ್ನು ದೃಢಪಡಿಸುವ ನಿಟ್ಟಿನಲ್ಲಿ ಇಂತಹ ಕ್ರಮ ಜರಗಿಸಲಾಗುತ್ತಿದೆ ಎಂದು ಚೀಫ್ ಜಸ್ಟಿಸ್‍ರನ್ನೊಳಗೊಂಡ ಜಸ್ಟಿಸ್ ಸೂರ್ಯಕಾಂತ್, ಹಿಮಾ ಕೊಹ್ಲಿ ಪೀಠ ತಿಳಿಸಿದೆ. ಘಟನೆಯಲ್ಲಿ ಉತ್ತರಪ್ರದೇಶ ಸರಕಾರ ಸಲ್ಲಿಸಿದ ತನಿಖಾ ವರದಿಯಲ್ಲಿ ಹೊಸದೇನೂ ಇಲ್ಲ ಎಂದು ಸುಪ್ರೀಂ ಕೋರ್ಟು ತರಾಟೆಗೆತ್ತಿಕೊಂಡಿದೆ. ಆರೋಪಿಗಳ ಫೋನ್ ವಶಪಡಿಸಿರಲಿಲ್ಲ. ಪ್ರಕರಣದಲ್ಲಿ 13 ಮಂದಿ ಆರೋಪಿಗಳಿದ್ದು ಒಬ್ಬನ ಫೋನ್ ಮಾತ್ರ ವಶಪಡಿಸಿಕೊಳ್ಳಲಾಗಿದೆ. ಈವಿಷಯದಲ್ಲಿ ಸರಕಾರ ನೀಡಿದ ಸ್ಪಷ್ಟನೆ ತೃಪ್ತಿಕರವಲ್ಲ ಎಂದು ಕೋರ್ಟು ಹೇಳೀತು. ಅಕ್ಟೋಬರ್ ಮೂರರಂದು ಪ್ರಕರಣಕ್ಕೆ ಆಸ್ಪದವಾದ ಘಟನೆ ನಡೆಯಿತು. ನಾಲ್ವರು ರೈತರ ಸಹಿತ ಎಂಟು ಮಂದಿ ಘಟನೆಯಲ್ಲಿ ಮೃತಪಟ್ಟಿದ್ದಾರೆ.