ಜರ್ಮನಿ ಹಾಗೂ ಬ್ರಿಟನ್‍ನಲ್ಲಿ ಭುಗಿಲೆದ್ದ ಮಾಸ್ಕ್ ವಿರೋಧಿ ಪ್ರತಿಭಟನೆ

0
733

ಸನ್ಮಾರ್ಗ ವಾರ್ತೆ

ಬರ್ಲಿನ್,ಆ.3: ಕೊರೋನ ಮಹಾಮಾರಿ ಪ್ರತಿರೋಧಿಸುವ ಪ್ರಯುಕ್ತ ಪ್ರಧಾನ ಮಾರ್ಗ ಸೂಚಿಯಾದ ಮಾಸ್ಕ್ ಧರಿಸುವುದರ ವಿರುದ್ಧ ಅಮೆರಿಕದ ನಂತರ ಬ್ರಿಟನ್ ಹಾಗೂ ಜರ್ಮನಿಗಳಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ.

ಲೋಕದಲ್ಲೇ ಅತ್ಯಂತ ತೀವ್ರ ಕೊರೋನ ಹಾವಳಿ ಇರುವ ಯುರೋಪಿನಲ್ಲಿಯೇ ಜನರು ಮಾಸ್ಕ್ ಧರಿಸುವುದು ಸಹಿತ ಸುರಕ್ಷಾ ಮಾನದಂಡಗಳನ್ನು ಪಾಲಿಸಲು ನಿರಾಕರಿಸುವ ದೃಶ್ಯ ಬಹಿರಂಗವಾಗುತ್ತಿವೆ.

ಜರ್ಮನಿ ರಾಜಧಾನಿ ಬರ್ಲಿನ್‍ನಲ್ಲಿ ಸಾವಿರಾರು ಮಂದಿ ಕೊರೋನ ಪ್ರತಿರೋಧ ಕ್ರಮಗಳ ವಿರುದ್ಧ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಜನರ ಸ್ವಾತಂತ್ರ್ಯ ಹಕ್ಕು ನಿಷೇಧಿಸಲಾಗುತ್ತಿದೆ ಎಂದು ಇವರು ಅಪಸ್ವರ ಎತ್ತಿದ್ದಾರೆ.

17,000ದಷ್ಟು ಜನರು ಭಾಗವಹಿಸಿದ್ದಾರೆ ಎನ್ನಲಾದ ರ‌್ಯಾಲಿಯಲ್ಲಿ ಸ್ವಾತಂತ್ರ್ಯ ವಾದಿಗಳು ವಾಕ್ಸಿನೇಶನ್ ವಿರೋಧಿ ಕಾರ್ಯಕರ್ತರು ಸಂವಿಧಾನದ ಲಾಯಲಿಸ್ಟ್‌ಗಳು ಭಾಗವಹಿಸಿದ್ದಾರೆ.

ಸ್ವಾತಂತ್ರ್ಯ ಬೇಕು. ಮಹಾಮಾರಿ ಹೆಸರಿನಲ್ಲಿ ನಿಯಂತ್ರಿಸುವುದು ಕೊನೆಗೊಳಿಸಿ, ಸ್ವಾತಂತ್ರ್ಯ ಮರಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಸರ್ವಾಧಿಕಾರದ ಹೊಸ ಮುಖ ಮಾಸ್ಕ್ ಎಂದು ಬ್ರಿಟನಿನ ಪ್ರತಿಭಟನಾಕಾರರು ಘೋಷಣೆ ಕೂಗುತ್ತಿದ್ದಾರೆ. ಬ್ರಿಟನ್‍ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.