ಸನ್ಮಾರ್ಗ ಜು. 19, 2019
ಸರಣ್, ಜು. 19: ದನ ಕಳವು ಮಾಡುವವರೆಂದು ಶಂಕಿಸಿ ಬಿಹಾರದಲ್ಲಿ ಮೂರು ಮಂದಿಯನ್ನು ಊರವರು ಹೊಡೆದು ಕೊಂದು ಹಾಕಿದ್ದಾರೆ. ಬಿಹಾರದ ಸರಣ್ ಜಿಲ್ಲೆಯ ಬನಿಯಾಪುರದಲ್ಲಿ ಶುಕ್ರವಾರ ಬೆಳಗ್ಗೆ ಘಟನೆ ನಡೆದಿದೆ. ನೆರೆಗ್ರಾಮದ ಮೂವರು ಆಕ್ರೋಶಿತರ ಹಲ್ಲೆಗೆ ಬಲಿಯಾಗಿದ್ದಾರೆ.
ಮೂವರು ದನ ಕದಿಯಲು ಬಂದಿದ್ದಾರೆ ಎಂದು ಉರ ಮಂದಿ ಆರೋಪಿಸಿ ಅವರನ್ನು ಹಿಡಿದು ಮಾರಣಾಂತಿಕವಾಗಿ ಹೊಡೆದರು. ಘಟನೆಯ ವಿವರ ತಿಳಿದು ಧಾವಿಸಿ ಬಂದ ಪೊಲೀಸರು ಮೂವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅವರು ಕೊನೆಯುಸಿರೆಳೆದರು. ಘಟನೆಯ ತನಿಖೆ ಆರಂಭವಾಗಿದ್ದು ಮೃತದೇಹವನ್ನು ಪೊಲೀಸರು ಪೋಸ್ಟ್ ಮಾರ್ಟಂಗೆ ಕಳುಹಿಸಿದ್ದಾರೆ.












