ಪಶ್ಚಿಮಬಂಗಾಳದಲ್ಲಿ ಸ್ಫೋಟ ಮೂವರ ಸಾವು

0
1018

ಸನ್ಮಾರ್ಗ ವಾರ್ತೆ

ಕೊಲ್ಕತಾ,ಅ.29: ಪಶ್ಚಿಮ ಬಂಗಾಳದ ಫಾರಸಿಪಾರ ಎಂಬಲ್ಲಿ ಬಾಂಬ್ ಸ್ಫೋಟಿಸಿದ ಪರಿಣಾಮ ಮೂವರು ಮೃತಪಟ್ಟಿದ್ದು ಒಬ್ಬರು ಗಾಯಗೊಂಡಿದ್ದಾರೆ. ದನ ಸಾಗಾಟಗಾರರು ಬಕೆಟ್‍ನಲ್ಲಿರಿಸಿದ್ದ ಬಾಂಬು ಸ್ಫೋಟಿಸಿತು ಎಂದು ಪ್ರಾಥಮಿಕ ವರದಿ ತಿಳಿಸಿದೆ. ಸೋಮವಾರ ಸಂಜೆ 6:20ಕ್ಕೆ ಘಟನೆ ನಡೆಯಿತು. ಗಾಯಾಳುವನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗಡಿ ರಕ್ಷಣಾ ಪಡೆ ತಿಳಿಸಿದೆ.