ಹಾಲು ವಿತರಣೆ ಸ್ಥಗಿತಗೊಳಿಸಿದ್ದಕ್ಕೆ ಸಿಆರ್‌ಪಿಎಫ್ ಜವಾನನಿಂದ ಕುಟುಂಬದ ಮೂವರ ಕೊಲೆ

0
565

ಸನ್ಮಾರ್ಗ ವಾರ್ತೆ

ಝಾರ್ಕಂಡ್, ಆ. 19: ಹಾಲು ವಿತರಣೆ ಸ್ಥಗಿತಗೊಳಿಸಿದ್ದಕ್ಕೆ ಸಂಬಂಧಿಸಿದ ಮಾತಿನ ಚಕಮಕಿಯಲ್ಲಿ ಒಂದೇ ಕುಟುಂಬದ ಮೂವರನ್ನು ರೈಲ್ವೆ ಸುರಕ್ಷಾ ಸೇನೆಯ ಜವಾನ ಗುಂಡು ಹಾರಿಸಿ ಕೊಲೆ ಮಾಡಿದ್ದು, ಇನ್ನು ಇಬ್ಬರು ಗಂಡೇಟಿನಿಂದ ಗಂಭೀರ ಗಾಯಗೊಂಡ ಘಟನೆ ಶನಿವಾರ ರಾತ್ರೆ ಬರ್ಕಾಕನ ರೈಲ್ವೆ ನಿಲ್ದಾಣ ಸಮೀಪದ ಕ್ವಾಟ್ರರ್ಸ್‍ನಲ್ಲಿ ನಡೆದಿದೆ. ಸಿಆರ್‌ಪಿಎಫ್ ಜವಾನ ಪವನ್‍ ಕುಮಾರ್ ಸಿಂಗ್ ಗುಂಡು ಹಾರಿಸಿ ರೈಲ್ವೆ ಪೋರ್ಟರ್ ಅಶೋಕ್ ಮ್(55), ಅವರ ಪತ್ನಿ ಲೀಲಾವತಿ ದೇವಿ(52), ಗರ್ಭಿಣಿಯ ಪುತ್ರಿ ಮೀನಾದೇವಿ(27) ಎಂಬವರನ್ನು ಕೊಲೆ ಮಾಡಿದ್ದಾನೆ. ಅಶೋಕ್ ರಾಮ್‍ನ ಮತ್ತೋರ್ವ ಪುತ್ರಿ ಸುಮನ್ ದೇವಿ(25), ಪುತ್ರ ಚಿಂತು ಮ್(20) ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದಾರೆ.

ಗುಂಡು ಹಾರಿಸಿದ ಜವಾನ ಪವನ್ ಕುಮಾರ್ ತಲೆ ತಪ್ಪಿಸಿಕೊಂಡಿದ್ದಾನೆ. ಪವನ್ ಕುಮಾರ್ ಮನೆಗೆ ಹಾಲು ಕೊಡದ್ದಕ್ಕಾಗಿ ಅಶೋಕ್ ರಾಮ್‍ನ ಕುಟುಂಬದ ಹತ್ಯೆ ಮಾಡಿದ್ದಾನೆ. 1200 ರೂಪಾಯಿ ಬಾಕಿ ಮಾಡಿದ್ದರಿಂದ ಹಾಲು ವಿತರಣೆಯನ್ನು ಅಶೋಕ್ ರಾಮ್ ನಿಲ್ಲಿಸಿದ್ದರು. ಇದರಿಂದ ರೊಚ್ಚಿಗೆದ್ದ ಪವನ್ ಕುಮಾರ್ ಯದ್ವಾತದ್ವಾ ಗುಂಡು ಹಾರಿಸಿದ್ದಾನೆ ಎಂದು ರಾಮ್‍ರವರ ಇನ್ನೊಬ್ಬ ಪುತ್ರ ಬಿಟ್ಟು ರಾಮ್ ಘಟನೆಯ ಕುರಿತು ಪೋಲಿಸರಿಗೆ ಮಾಹಿತಿ ನೀಡಿದರು. ಆರೋಪಿಯನ್ನು ಬಂಧಿಸಲು ವಿಫಲವಾದ ಪೊಲೀಸರ ವಿರುದ್ಧ ಜನರು ರಾಮ್‍ಗರ್-ರಾಂಚಿ ಹೈವೆ ರೈಲು ತಡೆ ನಿರ್ಮಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.