1967ರಲ್ಲಿ ಇಸ್ರೇಲ್ ವಿರುದ್ಧ ಅರಬರಿಗೆ ಯಾಕೆ ಸೋಲಾಯಿತೆಂದರೆ…

0
242

ಸನ್ಮಾರ್ಗ ವಾರ್ತೆ

✍️ಅಬ್ದುಸ್ಸಲಾಮ್ ವಾಣಿಯಂಬಲಮ್

ಸಂಘಟನೆಯಲ್ಲಿ ಕಾರ್ಯತಂತ್ರ ಯೋಜನೆಯ ಸಂಖ್ಯೆ ಇಳಿಕೆಯಾಗಿ ಭಾಷಣಕರ್ತರ ಉಪದೇಶಕರ ಸಂಖ್ಯೆ ಏರಿಕೆಯಾಗುವುದು ಅಪಾಯಕಾರಿಯಾಗಿದೆ.

ಪ್ರವಾದಿವರ್ಯರು(ಸ) ಹೇಳಿರುತ್ತಾರೆ, “ನೀವು ವಿದ್ವಾಂಸರು ಹೆಚ್ಚು ಮತ್ತು ಉಪದೇಶಕರು ಕಡಿಮೆ ಇರುವ ಕಾಲದಲ್ಲಿದ್ದೀರಿ. ಈ ಕಾಲದಲ್ಲಿ ಯಾರಾದರೂ ತನಗೆ ತಿಳಿದಿರುವ ವಿಚಾರಗಳಲ್ಲಿ ಹತ್ತರಲ್ಲಿ ಒಂದು ಕಾರ್ಯ ತ್ಯಜಿಸಿದರೆ ಅವನು ನಾಶವಾದನು.

ಜನರಿಗೆ ಒಂದು ಕಾಲ ಬರಲಿದೆ. ಅಂದು ವಿದ್ವಾಂಸರ ಸಂಖ್ಯೆಯು ಕಡಿಮೆಯಿರುವುದು. ಉಪದೇಶಕರು ಹೆಚ್ಚಿನ ಸಂಖ್ಯೆಯಲ್ಲಿರುವರು. ಆ ಕಾಲದಲ್ಲಿ ತನಗೆ ತೋಚಿದ ವಿಚಾರಗಳಲ್ಲಿ ಹತ್ತರಲ್ಲಿ ಒಂದನ್ನು ಭದ್ರವಾಗಿ ಹಿಡಿದುಕೊಂಡರೆ ಆತ ರಕ್ಷಣೆ ಹೊಂದುವನು.”

ಬದ್ರ್ ರಣಾಂಗಣದಲ್ಲಿ ಅಬೂಜಹಲನ ಭಾಷಣವು ಪ್ರಚೋದನೆ ಕೆರಳಿಸುವಿಕೆಯಿಂದ ಕೂಡಿದ್ದರೆ ಪ್ರವಾದಿವರ್ಯರ(ಸ) ಭಾಷಣವು ವಿವೇಕತನದ ವಿಚಾರಗಳ ಕಾರ್ಯತಂತ್ರದಿಂದ ಕೂಡಿತ್ತು.

“ಬದ್ರ‍್ ಗೆ ಹೋಗದೆ ನಾವು ಮರಳುವುದಿಲ್ಲ. ಅಲ್ಲಿ ಹೋಗಿ ನಾವು ಶರಾಬು ಸೇವಿಸಬೇಕು. ಹಾಡಿ ಕುಣಿಯಬೇಕು. ಅರಬರ ಒಳಿತು ಮತ್ತು ಮಹಾನತೆಯನ್ನು ಅವರು ಅರ್ಥೈಸಬೇಕು. ನಮ್ಮನ್ನು ಅವರು ಭಯ ಪಡಬೇಕು…” ಅಬೂಜಹಲನ ಈ ಭಾಷಣವನ್ನು ಕೇಳಿ ಪ್ರವಾದಿವರ್ಯರ(ಸ) ಅನುಯಾಯಿಗಳಿಗಿಂತ ಮೂರು ಪಟ್ಟು ಅಧಿಕವಿರುವ ಅವರ ಅನುಯಾಯಿಗಳು ಯುದ್ಧಕ್ಕೆ ಹೊರಡಲು ಸಿದ್ಧರಾದರು. ಆ ಸೇನೆಯ ಭಾವಾವೇಶ ಅಲ್ಪಸಂಖ್ಯಾತ ಇಸ್ಲಾಮೀ ಸೇನೆಯ ವಿವೇಕತನದ ಕಾರ್ಯತಂತ್ರದ ಮುಂದೆ ಶರಣಾಯಿತು.

ಹಾಗೆಯೇ ಅಲ್ಪಸಂಖ್ಯಾತ ಸಮುದಾಯವು ಬಹುಸಂಖ್ಯಾತ ಸಮುದಾಯವನ್ನು ಮಣಿಸಿತು.

ವಿವೇಕತನವು ವಿಜಯದ ಅಸ್ತ್ರವಾಗಿದೆ ಎಂಬ ತತ್ವವನ್ನು ಕುರ್‌ಆನ್ ಕಲಿಸುತ್ತದೆ. “ಓ ಪೈಗಂಬರರೇ, ಸತ್ಯವಿಶ್ವಾಸಿಗಳನ್ನು ಯುದ್ಧಕ್ಕೆ ಪ್ರೇರೇಪಿಸಿರಿ. ನಿಮ್ಮಲ್ಲಿ ಇಪ್ಪತ್ತು ಮಂದಿ ಸಹನಶೀಲರಿದ್ದರೆ ಅವರು ಇನ್ನೂರು ಮಂದಿಯ ಎದುರು ಜಯಗಳಿಸುವರು ಮತ್ತು ಇಂತಹ ನೂರು ಮಂದಿ ಇದ್ದರೆ ಸತ್ಯನಿಷೇಧಿಗಳ ಸಾವಿರ ಮಂದಿಯನ್ನು ಎದುರಿಸಬಲ್ಲರು. ಏಕೆಂದರೆ ಅವರು (ಸತ್ಯನಿಷೇಧಿಗಳು) ತಿಳಿಗೇಡಿಗಳು.” (ಅಲ್ ಅಂಫಾಲ್: 65)

ಇಪ್ಪತ್ತು ಸತ್ಯವಿಶ್ವಾಸಿಗಳಿಗೆ ಇನ್ನೂರು ಸತ್ಯನಿಷೇಧಿಗಳನ್ನು ಮಣಿಸಲು ಸಾಧ್ಯ. ಯಾಕೆಂದರೆ ಸತ್ಯನಿಷೇಧಿಗಳು ಗ್ರಾಹ್ಯ ಶಕ್ತಿಯಿಲ್ಲದವರಾಗಿದ್ದಾರೆ ಎಂಬುದನ್ನು ಕುರ್‌ಆನ್ ಹೇಳುತ್ತದೆ. ಅವರಿಗೆ ಜಯಾಪಜಯದ ಕುರಿತಾಗಲೀ ಅದರ ತಳಹದಿಯ ಕುರಿತಾಗಲೀ, ಸಮಾಜ ನಿರ್ಮಾಣದ ಪ್ರಕ್ರಿಯೆಯ ಕುರಿತಾಗಲೀ ಅವಿವೇಕಿಗಳಾಗಿದ್ದಾರೆ. ಈ ಗ್ರಾಹ್ಯ ಶಕ್ತಿ(ಫಿಕ್ಹ್) ಮುಸ್ಲಿಮರಿಗೆ ಇಲ್ಲದಿದ್ದಲ್ಲಿ ಅವರೂ ಪರಾಜಯ ಹೊಂದುವುದು ಸಹಜವಾಗಿದೆ.

ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಇದೇ ಕಾರಣದಿಂದ ಅರಬರು 1967ರಲ್ಲಿ ದಯನೀಯವಾದ ಸೋಲು ಅನುಭವಿಸಿದರು. ಕುರ್‌ಆನ್ ಕಲಿಸಿದ ವಿಜಯದ ತತ್ವಗಳನ್ನೂ ಪ್ರವಾದಿವರ್ಯರ(ಸ) ಕಾರ್ಯ ತಂತ್ರವನ್ನೂ ಇಸ್ರೇಲ್ ಅನುಸರಿಸಿತು. ತಮ್ಮ ಸಮುದಾಯವನ್ನು ಸಿದ್ದಗೊಳಿಸಿ ತ್ಯಾಗಕ್ಕೆ ಸಜ್ಜುಗೊಳಿಸಿ ಒಂದಾಗಿಸಿದರು. ಜನರಲ್ಲಿ ದೇವನ ಸಹಾಯ ನಮಗೆ ಮಾತ್ರ ಎಂಬುದನ್ನು ನಂಬಿಸಿ ಆತ್ಮವಿಶ್ವಾಸ ಮೂಡಿಸಿದರು. ಅರಬರು ಅಬೂಜಹಲ್ ಬದ್ರ‍್ ಗೆ ಹೊರಟ ರೀತಿಯಲ್ಲಿ ಹೊರಟರು. ಅವರು ಕುರ್‌ಆನಿನಿಂದಲ್ಲ, ಉಮ್ಮು ಕುಲ್ಸೂಮ್‌ರವರ ಹಾಡಿನ ಮೂಲಕ ಪ್ರಚೋದನೆ ಪಡೆದು ರಂಗಕ್ಕಿಳಿದರು. ಇಸ್ರೇಲನ್ನು ಸಮುದ್ರಕ್ಕೆಸೆಯುವೆವು ಎಂಬ ಭಾಷಣಗಳು ಮಾತ್ರ ಅವರ ಬಂಡವಾಳವಾಗಿತ್ತು. ಹಾಗೆಯೇ ಬದ್ರ‍್ ನಲ್ಲಿ ಅಬೂಜಹಲ್ ಮತ್ತು ಅನುಯಾಯಿಗಳು ಸೋತು ಸುಣ್ಣವಾದಂತೆ ಜಮಾಲ್ ಅಬ್ದುನ್ನಾಸಿರ್ ಮತ್ತವರ ಸೇನೆಯು ಕೆಲವೇ ಗಂಟೆಗಳಲ್ಲಿ ಇಸ್ರೇಲ್‌ನ ಮುಂದೆ ಕುಸಿಯಿತು.

ರಾಜಕೀಯ, ಸಾಮಾಜಿಕ ತತ್ವ, ಆರ್ಥಿಕ ತತ್ವ, ಸಂಸ್ಕೃತಿ, ನಾಗರಿಕತೆ ಮುಂತಾದ ವಿಚಾರಗಳಲ್ಲಿ ಸಂಘಟನೆಯ ಒಳಗಡೆ ಗಹನವಾದ ಚರ್ಚೆ, ಸಂವಾದ ನಡೆಸಲು ಕಾರ್ಯಕ್ರಮ ರೂಪಿಸಬೇಕು. ಕಾರ್ಯತಂತ್ರದ ಯೋಜನೆಗಳಿಗೆ ವಿವಿಧ ರೀತಿಯ ವೇದಿಕೆಗಳು ಉಂಟಾಗಬೇಕು. ಹೊರಗಿರುವ ತಜ್ಞರ ಅಭಿಪ್ರಾಯಗಳನ್ನೂ ನೆರವುಗಳನ್ನೂ ಪಡೆಯಬೇಕು. ಥಿಂಕ್ ಟಾಂಕ್ ಗಳನ್ನು ತಯಾರಿಸಬೇಕು. ಜಗತ್ತಿನಲ್ಲಿ ಇಂದು ಯಶಸ್ವಿಯಾಗುತ್ತಿರುವವರು ಹೇಗೆ ವಿಜಯ ಹೊಂದುತ್ತಿದ್ದಾರೆ ಎಂದು ಅಧ್ಯಯನ ಮಾಡಿದಾಗ ಥಿಂಕ್ ಟಾಂಕ್ ನ ಅಗತ್ಯದ ಮನವರಿಕೆಯಾಗುತ್ತದೆ.

ಹೊಸ ಕಾಲದಲ್ಲಿ ಕಾರ್ಯ ಚಟುವಟಿಕೆಗಳು ಮಂತ್ರಿ ಮಂಡಲದಲ್ಲಿ ಮಾತ್ರ ರಚಿತವಾಗುವುದಲ್ಲ. ಥಿಂಕ್ ಟಾಂಕ್ ಮತ್ತು ರಿಸರ್ಚ್ ಸೆಂಟರ್‌ಗಳಲ್ಲಾಗಿದೆ. ಅಂತಹ ಸಾವಿರಾರು ಕೇಂದ್ರಗಳಿವೆ. ಮುಸ್ಲಿಮ್ ಜಗತ್ತಿಗೆ ಆಮದು ಮಾಡುವ ಹಲವು ಸಿದ್ಧಾಂತಗಳು ಆ ಸೆಂಟರ್‌ಗಳಿಂದ ಪಾಕ ಮಾಡಿ ಕಳುಹಿಸಲಾಗುತ್ತದೆ.

ಅದೆ ವೇಳೆ ಜಗತ್ತಿನ ಮಹಾಶಕ್ತಿಗಳ ಜೊತೆ ಮುಖಾಮುಖಿಯಾಗಿರುವ ಇಸ್ಲಾಮೀ ಸಂಘಟನೆಗಳಲ್ಲಿ ಇಂತಹ ಕಾರ್ಯತಂತ್ರ, ಯೋಜನೆಗಳ ಕೇಂದ್ರಗಳು ಎಷ್ಟಿವೆ ಎಂಬುದರ ಬಗ್ಗೆ ಚಿಂತಿಸಿರಿ. ಇಸ್ಲಾಮೀ ಸಂಘಟನೆಯ ಚಟುವಟಿಕೆಗಳು ಕೇವಲ ಸಾಮಾಜಿಕ ರಂಗದಲ್ಲಿ ಮಾತ್ರ ಸಕ್ರಿಯವಾಗಿ ಹಿಂದೆ ಮುಂದೆ ನೋಡದೆ ಅಧ್ಯಯನ, ವಿವೇಕ, ಜ್ಞಾನವಿಲ್ಲದೆ ಒಟ್ಟಾರೆಯಾಗಿ ಮುಳುಗಿ ಹೋಗಿರಬಾರದು. ಅಂತಹ ಚಟುವಟಿಕೆಗಳನ್ನು ಮಾಡುವ ವರಿಗೆ ಸ್ವಯಂ ಸಂತೃಪ್ತಿಯುಂಟಾದರೂ ಇಸ್ಲಾಮಿಗಾಗಿ ಅವರಿಂದೇನೂ ಮಾಡಲಾಗದು.

ಮೊದಲನೆಯದಾಗಿ ಸಂಘಟನೆಗಳ ನೇತೃತ್ವ ವಹಿಸುವವರಿಗೆ ಸಾಮಾನ್ಯ ಜ್ಞಾನಕ್ಕಿಂತ ಮಿಗಿಲಾದ ತಂತ್ರ ಪ್ರಧಾನವಾದ (ಸ್ಟ್ರಾಟಜಿಕ್ ಥಿಂಕ್) ಚಿಂತನೆ ಇರಬೇಕು. ಆ ಚಿಂತನೆಗಳು ತಂತ್ರ ಪ್ರಧಾನವಾದ ಯೋಜನೆಗಳಾಗಿ (ಸ್ಟ್ರಾಟಜಿಕ್ ಪ್ಲಾನಿಂಗ್) ಪರಿವರ್ತಿಸಬೇಕು. ಆಗ ಮಾತ್ರ ಹೊಸ ಜಗತ್ತಿನ ಇಸ್ಲಾಮಿಸ್ಟ್ ಗಳಿಗೆ ಗೆಲುವು ಸಾಧಿಸಬಹುದು.
[ಸಶೇಷ]

LEAVE A REPLY

Please enter your comment!
Please enter your name here