ಮುಸ್ಲಿಮರ ವಿರುದ್ಧ ಚೀನೀ ಸರಕಾರದ ಹಿಂಸೆ: ಪ್ರಶ್ನಿಸಿದ ಹದಿಹರೆಯದ ಯುವತಿಯ ಟಿಕ್ ಟಾಕ್ ಖಾತೆಯೇ ರದ್ದು, ವಿಡಿಯೋ

0
1227

ಸನ್ಮಾರ್ಗ ವಾರ್ತೆ-

ನ್ಯೂಜೆರ್ಸಿ; ನ. ವಾಯುವ್ಯ ಚೀನಾದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಸಾಮೂಹಿಕ ಬಂಧನಗಳು, ಬಂಧನ ಕೇಂದ್ರದಲ್ಲಿ ಅವರಿಗೆ ನೀಡುತ್ತಿರುವ ಹಿಂಸೆಗಳನ್ನು ಟಿಕ್ ಟಾಕ್ ಮೂಲಕ ಪ್ರೇಕ್ಷಕರ ಮುಂದೆ ಬಿಚ್ಚಿಡುವ ಪ್ರಯತ್ನ ಮಾಡಿದ ಫಿರೋಜ ಎಂಬ ಹದಿ ಹರೆಯದ ಹುಡುಗಿಯ ಖಾತೆಯನ್ನು ಟಿಕ್ ಟಾಕ್ ರದ್ದು ಪಡಿಸಿದೆ ಎಂದು ದ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. 40 ಸೆಕೆಂಡುಗಳ ಈ ವಿಡಿಯೋವು ಟಿಕ್‌ಟಾಕ್‌ನಲ್ಲಿ 4,98,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ ಅನ್ನುವುದೇ ಇದರ ಜನಪ್ರಿಯತೆಯನ್ನು ಹೇಳುತ್ತದೆ.
ಟಿಕ್ ಟಾಕ್ ನ ಒಡೆಯರಾದ ಚೀನಾದ ಸಾಮಾಜಿಕ ಮಾಧ್ಯಮ ದೈತ್ಯ ಬೈಟ್‌ಡ್ಯಾನ್ಸ್, ಚೀನಾದ ಸರ್ಕಾರವು ಇಷ್ಟಪಡದಿರುವ ವೀಡಿಯೊಗಳನ್ನು ಸೆನ್ಸಾರ್ ಮಾಡುತ್ತದೆ ಅಥವಾ ರದ್ದು ಪಡಿಸುತ್ತದೆ. ಆದರೆ, ಬೈಟ್‌ಡ್ಯಾನ್ಸ್ ಈ ಆರೋಪವನ್ನು ನಿರಾಕರಿಸಿದ್ದು, ಖಾತೆ ರದ್ದಿಗೆ ಬೇರೆ ಕಾರಣಗಳನ್ನು ನೀಡಿದೆ. ಒಸಾಮಾ ಬಿನ್ ಲಾಡೆನ್ ನ ಚಿತ್ರವನ್ನು ಹೊಂದಿರುವ ವೀಡಿಯೊವನ್ನು ಪೋಸ್ಟ್ ಮಾಡಲು ಹಿಂದಿನ ಖಾತೆಯನ್ನು ಬಳಸಿದ್ದರಿಂದ ಅಜೀಜ್ ಅವರನ್ನು ತನ್ನ ಟಿಕ್ ಟಾಕ್ ಖಾತೆಯಿಂದ ನಿರ್ಬಂಧಿಸಲಾಗಿದೆ ಎಂದು ಬೈಟ್ ಡ್ಯಾನ್ಸ್ ವಕ್ತಾರ ಜೋಶ್ ಗಾರ್ಟ್ನರ್ ಹೇಳಿದ್ದಾರೆ. ಈ ಫೋಟೋ ಭಯೋತ್ಪಾದಕ ವಿಷಯದ ವಿರುದ್ಧ ಟಿಕ್‌ಟಾಕ್‌ನ ನೀತಿಗಳನ್ನು ಉಲ್ಲಂಘಿಸಿದೆ ಎಂದು ಗಾರ್ಟ್ನರ್ ಹೇಳಿದರು, ಅದಕ್ಕಾಗಿಯೇ ಆಕೆಯ ಖಾತೆ ಮತ್ತು ಅವರು ಪೋಸ್ಟ್ ಮಾಡುತ್ತಿರುವ ಸಾಧನಗಳನ್ನು ನಿಷೇಧಿಸಲಾಗಿದೆ ಎಂದವರು ಹೇಳಿದ್ದಾರೆ.

ಅಮೆರಿಕಾದ ನ್ಯೂಜೆರ್ಸಿಯ 17 ವರ್ಷದ ಶಾಲಾ ವಿದ್ಯಾರ್ಥಿನಿ ಅಜೀಜ್ ಮಂಗಳವಾರ ಇಮೇಲ್ ಮೂಲಕ ಹೇಳಿಕೆಯೊಂದನ್ನು ನೀಡಿ, ತನ್ನ ಟಿಕ್ ಟಾಕ್ ವೀಡಿಯೊಗಳು ಅಮೆರಿಕಾದಲ್ಲಿ ಅನುಭವಿಸಿದ ವರ್ಣಭೇದ ನೀತಿ ಮತ್ತು ತಾರತಮ್ಯವನ್ನು ಬೆಳಕಿಗೆ ತರಲು ಪ್ರಯತ್ನಿಸಿದೆ ಎಂದು ಹೇಳಿದರು. ಒಂದು ವೀಡಿಯೊದಲ್ಲಿ ಆಕೆ, ತನ್ನನ್ನು ಮತ್ತು ಇತರ ಮುಸ್ಲಿಮರನ್ನು ಅಮೆರಿಕಾದಲ್ಲಿ ಮೂದಲಿಸುತ್ತಿರುವ ಬಗ್ಗೆ ಹೇಳಿಕೊಂಡಿದ್ದಾಳೆ: ನೀವು ಬಿನ್ ಲಾಡೆನ್ ನನ್ನ ಮದುವೆಯಾಗುವವರು ಎಂದು ಮೂದಲಿಸುವುದನ್ನು ಆಕೆ ಬಿಚ್ಚಿಟ್ಟಿದ್ದಾಳೆ.

ಅಂದಹಾಗೆ, ಕಳೆದ ಕೆಲವು ವರ್ಷಗಳಿಂದ, ಚೀನಾ ಸರ್ಕಾರವು 1 ಮಿಲಿಯನ್ ಮುಸ್ಲಿಂ ಜನಾಂಗೀಯ ಉಯಿಘರ್, ಕಝಕ್ ಮತ್ತು ಇತರರನ್ನು ಬಂಧನ ಶಿಬಿರಗಳು ಮತ್ತು ಕಾರಾಗೃಹಗಳಿಗೆ ತಳ್ಳಿದೆ.