ಸಿಪಿಎಂ ಕಾರ್ಯಕರ್ತರಾದ ಅಲನ್, ತಾಹಾರಿಗೆ ಜಾಮೀನು ನಿರಾಕರಣೆ

0
616

ಸನ್ಮಾರ್ಗ ವಾರ್ತೆ

ಕೊಚ್ಚಿ,ನ.27:ಪಂದಿರೀಂಗಾವ್ ಯುಎಪಿಎ ಪ್ರಕರಣದಲ್ಲಿ ಬಂಧಿಸಲಾಗಿರುವ ಎಸ್‍ಎಫ್‍ಐ ಕಾರ್ಯಕರ್ತರಾದ ಅಲನ್ ಶುಹೈಬ್ ಮತ್ತು ತಾಹಾ ಫಝಲ್‍ಗೆ ಜಾಮೀನು ನಿರಾಕರಿಸಲಾಗಿದೆ. ಇಬ್ಬರ ಜಾಮೀನು ಅರ್ಜಿಯನ್ನು ಹೈಕೋರ್ಟುತಿರಸ್ಕರಿಸಿದೆ. ಜಾಮೀನು ನೀಡಬಾರದೆಂದು ಸರಕಾರ ಹೈಕೋರ್ಟಿನಲ್ಲಿ ವಾದಿಸಿದೆ. ಪ್ರಕರಣದ ಮೂರನೆಯ ವ್ಯಕ್ತಿ ಕೂಡ ಬಂಧನಕ್ಕೆ ಒಳಗಾಗಬೇಕಾಗಿದೆ. ತನಿಖೆ ನಡೆಯುತ್ತಿದೆ. ಈ ಪರಿಸ್ಥಿತಿಯಲ್ಲಿ ಜಾಮೀನು ನೀಡಬಾರದೆಂದು ಪ್ರಾಸಿಕ್ಯೂಶನ್ ವಾದಿಸಿದೆ.

ಇದೇ ವೇಳೆ, ಮಾವೋವಾದಿಗಳೊಂದಿಗೆ ಸಂಬಂಧ ಇಲ್ಲ ಎಂದು ಆರೋಪಿ ಪರ ವಕೀಲರು ವಾದಿಸಿದರು. ತನಿಖೆ ನಡೆಯುತ್ತಿರುವುದರಿಂದ ಜಾಮೀನು ನೀಡಲಾಗದು ಎಂದು ಹೈಕೋರ್ಟು ತಿಳಿಸಿದೆ. ಈ ಹಿಂದೆ ಅಲನ್ ತಾಹಾರ ಜಾಮೀನು ಅರ್ಜಿಯನ್ನು ಕೆಳಕೋರ್ಟು ಎರಡು ಬಾರಿ ತಿರಸ್ಕರಿಸಿತ್ತು. ಈಗ ಹೈಕೋರ್ಟು ಕೂಡ ಜಾಮೀನು ಅರ್ಜಿ ತಿರಸ್ಕರಿಸಿದೆ.