ಟಿಕ್‍ಟಾಕ್ ತಾರೆಯ ಆತ್ಮಹತ್ಯೆಗೆ ಪ್ರೇರಣೆ ಆರೋಪ: ಮಹಾರಾಷ್ಟ್ರ ಸಚಿವ ರಾಜೀನಾಮೆ

0
504

ಸನ್ಮಾರ್ಗ ವಾರ್ತೆ

ಮುಂಬೈ: ಟಿಕ್‍ಟಾಕ್ ತಾರೆಯಾಗಿದ್ದ ಪೂಜಾ ಚವಾಣ್(22) ಎಂಬ ಯುವತಿಯ ಆತ್ಮಹತ್ಯೆಗೆ ಸಂಬಂಧಿಸಿ ಆರೋಪಕ್ಕೆ ಗುರಿಯಾಗಿದ್ದ ಮಹಾರಾಷ್ಟ್ರದ ಅರಣ್ಯ ಸಚಿವ ಸಂಜಯ್ ರಾಥೋಡ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯ ಪತ್ರವನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಕಳುಹಿಸಿದ್ದು, ರಾಜೀನಾಮೆಯನ್ನು ಮುಖ್ಯಮಂತ್ರಿ ಸ್ವೀಕರಿಸಿಲ್ಲ. ವಿದರ್ಭದ ಶಿವಸೇನೆ ನಾಯರಾಗಿರುವ ರಾಥೋಡ್‍ಬಂಜಾರ ಸಮುದಾಯದ ನಾಯಕರಾಗಿದ್ದಾರೆ.

ಸಂಜಯ್ ಚವಾಣ್‍ರ ಫೋನ್ ಕರೆ ಎನ್ನಲಾದ ಹನ್ನೊಂದು ವೀಡಿಯೊ ಕ್ಲಿಪ್‍ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದರೊಂದಿಗೆ ಮಹಾರಾಷ್ಟ್ರದ ಬಿಜೆಪಿ ನಾಯಕರು ಸಚಿವರ ರಾಜೀನಾಮೆ ಮತ್ತು ಪೂಜಾ ಆತ್ಮಹತ್ಯೆ ಘಟನೆ ತನಿಖೆಗೆ ಆಗ್ರಹಿಸಿ ರಂಗ ಪ್ರವೇಶಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಚಿವರಿಂದ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ನೇರವಾಗಿ ವಿವರಣೆ ಕೇಳಿದ್ದರು. ನಂತರ ಘಟನೆಯಲ್ಲಿ ತನಿಖೆಗೆ ಮುಖ್ಯಮಂತ್ರಿ ಆದೇಶ ಹೊರಡಿಸಿದ್ದರು. ಪುಣೆ ಪೊಲೀಸ್ ಕಮಿಶನರ್ ಅಮಿತಾಬ್ ಗುಫ್ತ ಪ್ರಕರಣದಲ್ಲಿ ಪ್ರಾಥಮಿಕ ಮಾಹಿತಿಯನ್ನು ಸೋಮವಾರ ಮುಖ್ಯಮಂತ್ರಿಗೆ ತಿಳಿಸಿದ್ದಾರೆ. ಸಚಿವರ ವಿರುದ್ಧ ಆರೋಪಗಳನ್ನು ಪೂಜಾರ ಸಂಬಂಧಿಕರು ಅಲ್ಲಗಳೆದಿದ್ದಾರೆ. ಕಳೆದ ಏಳನೆ ತಾರೀಕಿನಿಂದ ಸಹೋದರನ ವಸತಿಯಿಂದ ಕೆಳಗೆ ಬಿದ್ದು ಪೂಜಾ ಮೃತಪಟ್ಟಿದ್ದರು. ಬೀಡ್‍ನವರಾದ ಪೂಜಾ ಸ್ಪೋಕನ್ ಇಂಗ್ಲಿಷ್ ಕಲಿಯಲು ಪುಣೆಗೆ ಬಂದಿದ್ದ ಈಕೆ ಟಿಕ್‍ಟಾಕ್ ತಾರೆಯಾಗಿ ಗುರುತಿಸಿಕೊಂಡಿದ್ದರು.