5ನೇ ತರಗತಿ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ: ಶಾಲಾ ಪ್ರಿನ್ಸಿಪಾಲ್‍ಗೆ ಮರಣದಂಡನೆ ಶಿಕ್ಷೆ ತೀರ್ಪು

0
585

ಸನ್ಮಾರ್ಗ ವಾರ್ತೆ

ಪಾಟ್ನ: ಐದನೇ ತರಗತಿ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಪಾಟ್ನದ ಶಾಲೆಯ ಪ್ರಿನ್ಸಿಪಾಲ್ ಗೆ ವಿಶೇಷ ಪೊಕ್ಸೊ ಜಡ್ಜ್ ಗಲ್ಲು ಶಿಕ್ಷೆಯ ತೀರ್ಪು ನೀಡಿದ್ದಾರೆ.

ಸೋಮವಾರ ವಿಶೇಷ ಪೊಕ್ಸೊ ಜಡ್ಜ್ ಅವಧೇಶ್ ಕುಮಾರ್, ಅಪರಾಧಿ ಪ್ರಿನ್ಸಿಪಾಲ್ ಅರವಿಂದ್ ಕುಮಾರ್ ಎಂಬಾತನಿಗೆ ಗಲ್ಲು ಶಿಕ್ಷೆ ಮತ್ತು ಒಂದು ಲಕ್ಷ ದಂಡದ ಶಿಕ್ಷೆ ಮತ್ತು ಸಹ ಆರೋಪಿ ಅಭಿಶೇಕ್ ಕುಮಾರ್ ಎಂಬಾತನಿಗೆ ಜೀವಾವಧಿ ಜೈಲು ಶಿಕ್ಷೆ, ಐವತ್ತು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ನಗರದ ಫುಲ್ ವಾರಿ ಶರೀಪ್ ಪ್ರದೇಶದ ಶಾಲೆ ಅಧ್ಯಾಪಕರು ಆಗಿದ್ದಾರೆ.

2018 ಸೆಪ್ಟಂಬರ್ ನಲ್ಲಿ ಐದನೇ ತರಗತಿ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದ ಘಟನೆ ನಡೆದಿತ್ತು. ವಿದ್ಯಾರ್ಥಿನಿಗೆ ದೈಹಿಕ ಅನಾರೋಗ್ಯ ಗೋಚರಿಸಿ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಹನ್ನೊಂದು ವರ್ಷದ ಬಾಲಕಿ ಗರ್ಭಿಣಿ ಎಂದು ಕಂಡು ಬಂದಿತ್ತು. ನಂತರ ನಡೆದ ತನಿಖೆಯಲ್ಲಿ ಆರೋಪಿಗಳ ಪಾತ್ರ ಬಯಲಿಗೆ ಬಂದಿತ್ತು.