ಅಧ್ಯಕ್ಷರ ಚುನಾವಣೆಯೆಡೆಗೆ ಕಾಂಗ್ರೆಸ್

0
429

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.23: ಹಿರಿಯ ನಾಯಕರ ಭಿನ್ನಧ್ವನಿಯ ಬೆನ್ನಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತುಂಬುವುದಕ್ಕೆ ಹೊರಟಿದೆ. ಡಿಜಿಟಲ್ ರೀತಿಯಲ್ಲಿ ಚುನಾವಣೆಗೆ ಕಾಂಗ್ರೆಸ್‍ನ ಕೇಂದ್ರ ಚುನಾವಣಾ ಅಥಾರಿಟಿ ನಿರ್ಧರಿಸಿದೆ. ಇದಕ್ಕೆ ಇಲಕ್ಟ್ರಲ್ ಕೊಲೆಜ್ ಸದಸ್ಯರಿಗೆ ಎಲ್ಲ ವೈಯಕ್ತಿಕ ವಿವರಗಳಿರುವ ಡಿಜಿಟಲ್ ಕಾರ್ಡ್ ನೀಡಲಾಗುವುದು. ಇದಕ್ಕೆ ಕಾಂಗ್ರೆಸ್ ಕಾರ್ಯಕಾರಿಣಿಯ ಅನುಮತಿ ಸಿಗಬೇಕಾಗಿದೆ. ಅನುಮತಿ ಸಿಕ್ಕಿದೊಡನೆ ಚುನಾವಣೆ ನಡೆಯಲಿದೆ ಎಂದು ಅಥಾರಿಟಿ ಅಧ್ಯಕ್ಷ ಮಧುಸೂಧನ ಮಿಸ್ತ್ರಿ ತಿಳಿಸಿದ್ದಾರೆ.

2017ರಲ್ಲಿ ರಾಹುಲ್ ಗಾಂಧಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಅದೇ ಇಲೆಕ್ಟ್ರಲ್ ಕಾಲೇಜ್ ಈಗಲೂ ಇದೆ. ಎರಡು ರಾಜ್ಯಗಳನ್ನು ಹೊರತುಪಡಿಸಿ ಎಐಸಿಸಿ ಸದಸ್ಯರ ಪಟ್ಟಿ ಸಿಕ್ಕಿದೆ ಎನ್ನಲಾಗಿದೆ. ಕಾಂಗ್ರೆಸ್ ಸಂಘಟನಾ ಮಟ್ಟದಲ್ಲಿ ಸಹಿತ ಅಮೂಲಾಗ್ರ ಬದಲಾವಣೆ ಮತ್ತು ತುರ್ತು ಚುನಾವಣೆ ಆಗ್ರಹಿಸಿ 23 ನಾಯಕರು ಪತ್ರ ಬರೆದಿದ್ದರು.

ಬ್ಲಾಕ್ ಮಟ್ಟದಿಂದ ಕಾರ್ಯಕರ್ತ ಸಮಿತಿಯವರೆಗೆ ಚುನಾವಣೆ ನಡೆಸಬೇಕೆಂದು ಆಗ್ರಹಿಸಿದ್ದರು. ಅಥಾರಿಟಿ ಎರಡು ಬಾರಿ ಸಭೆ ಸೇರಿ ಎಐಸಿಸಿ ಸದಸ್ಯರ ಪಟ್ಟಿಯನ್ನು ಕೇಳಿತ್ತು. ಆದರೆ ಎಐಸಿಸಿ ಸದಸ್ಯರ ಚುನಾವಣೆ ಮೊದಲು ನಡೆಯಬೇಕೆಂದು ನಾಮನಿರ್ದೇಶಿಸುವ ರೂಢಿಯನ್ನು ಕೈಬಿಡಬೇಕೆಂದು ಪಾರ್ಟಿ ದುರ್ಬಲವಾಗಿದೆ ಎಂದು ಒಪ್ಪಬೇಕೆಂದು ಹಿರಿಯ ನಾಯಕ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಬಹಿರಂಗವಾಗಿ ಹೇಳಿದ್ದರು.