ತಂಬಾಕು ನಿಯಂತ್ರಣ ಮಂಡಳಿಯಿಂದ ದಿಡೀರ್ ದಾಳಿ

0
152

ಸನ್ಮಾರ್ಗವಾರ್ತೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇಲ್ಲಿನ ಅಧಿಕಾರಿಗಳಿಂದ ಅಂಗಡಿ ಮುಂಗಟ್ಟು ಗಳ ಮೇಲೆ ದಿಢೀರ್ ದಾಳಿ ನಡೆಸಲಾಯಿತು. ಏಕಕಾಲದಲ್ಲಿ ಮಂಗಳೂರು ನಗರದ ಬಿಜೈ ಹಾಗೂ ಕೆಎಸ್ಆರ್ಟಿಸಿ ಬಸ್‍ ಸ್ಟ್ಯಾಂಡ್ ಮುಂಭಾಗದಲ್ಲಿ ಪ್ಲಾಸ್ಟಿಕ್ ಮತ್ತು ತಂಬಾಕು ನಿಯಂತ್ರಣ ಕಾರ್ಯಾಚರಣೆ ಮಾಡಲಾಯಿತು. ಅಧಿಕಾರಿಗಳು ಸ್ಥಳದಲ್ಲಿಯೇ 32 ಪ್ರಕರಣ ದಾಖಲಿಸಿ ರೂಪಾಯಿ ನಾಲ್ಕು ಸಾವಿರ ದಂಡ ಸಂಗ್ರಹಿಸಿದರು. ಇದೇ ವೇಳೆ ಸೆಕ್ಷನ್ 5 ರ ಅಡಿ ನಾಲ್ಕು ನಾಮಫಲಕ ತೆರವುಗೊಳಿಸಿ ಅಂಗಡಿಗಳಿಗೆ ಎಚ್ಚರಿಕೆ ನೀಡಲಾಯಿತು .ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಸಾಕಷ್ಟು ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿದರು. ಈ ಕಾರ್ಯಾಚರಣೆಯಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳಾದ ಜಯಶಂಕರ್, ಭಾಸ್ಕರ್, ಅಶ್ವಿನಿ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪುಂಡಲೀಕ ಲಕಾಟಿ, ಶೃತಿ ಸಾಲಿಯಾನ್ ಭಾಗವಹಿಸಿದರು.